ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ಮಣಿಪಾಲದಲ್ಲಿದೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಣಿಪಾಲ, ಏಪ್ರಿಲ್ 15 : ಶೈಕ್ಷಣಿಕ ಕ್ಷೇತ್ರದಲ್ಲಿ ಈಗಾಗಲೇ ಹಲವು ದಾಖಲೆ ಮಾಡಿರುವ ಮಣಿಪಾಲ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ನಿರ್ಮಿಸಿರುವ ಮಣಿಪಾಲದ ವಿದ್ಯಾರ್ಥಿ ಗಿನ್ನಿಸ್ ದಾಖಲೆ ಪುಟ ಸೇರಲು ಸಜ್ಜಾಗಿದ್ದಾರೆ.

ಎಂಐಟಿ ಎಲೆಕ್ಟ್ರಿಕಲ್ ಆಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿ ಅರ್ಮಾನ್ ವಿಶ್ವದ ಅತಿ ದೊಡ್ಡ ಸೆಲ್ಫಿ ಸ್ಟಿಕ್ ತಯಾರಿಸಿದ್ದಾರೆ. ಮೂಲತಃ ಮಂಗಳೂರಿನ ಹಂಪನಕಟ್ಟೆಯ ಅರ್ಮಾನ್ ಸೋಮವಾರ ಮಣಿಪಾಲದಲ್ಲಿ ನಡೆದ ಸಮಾರಂಭದಲ್ಲಿ ಸ್ಟಿಕ್‌ ಅನ್ನು ಅನಾವರಣಗೊಳಿಸಿದ್ದಾರೆ. [ಮಂಗಳೂರಲ್ಲಿ ಸೆಲ್ಫಿ ಬೂತ್, ಫೋಟೋ ಕ್ಲಿಕ್ಕಿಸಿ ಫಟಾಫಟ್]

manipal

ಅರ್ಮಾನ್ ಅಲ್ಯೂಮಿನಿಯಂನಿಂದ ತಯಾರಿಸಿದ ಸ್ಟಿಕ್ 10.39 ಮೀ ಉದ್ದವಿದೆ. ಸ್ಟಿಕ್ ವೀಕ್ಷಿಸಲು ಬಂದಿದ್ದ ಗಿನ್ನಿಸ್ ತಂಡದ ಸದಸ್ಯರು ಅರ್ಮಾನ್ ಜೊತೆ ಸೆಲ್ಫಿ ತೆಗೆಸಿಕೊಂಡರು. ಅಮೆರಿಕಾದ ನಟ, ಚಿತ್ರ ನಿರ್ಮಾಪಕ ಬೆನ್ ಸ್ಟಿಲ್ಲರ್ 8.56 ಮೀಟರ್ ಉದ್ದದ ಸ್ಟಿಕ್ ಸಿದ್ಧಪಡಿಸಿದ್ದರು. ಈಗ ಆ ದಾಖಲೆಯನ್ನು ಅರ್ಮಾನ್ ಮುರಿಯಲಿದ್ದಾರೆ. [ಸೆಲ್ಫಿಗೆ ಪೋಸ್ ಕೊಡಲು ಹೋಗಿ ಇಹಲೋಕ ತ್ಯಜಿಸಿದ]

ಡಿವೈಎಸ್‌ಪಿ ಎಸ್.ಜೆ ಕುಮಾರಸ್ವಾಮಿ, ಎಂಐಟಿ ನಿರ್ದೇಶಕ ಡಾ.ಜಿ.ಕೆ.ಪ್ರಭು, ಜಂಟಿ ನಿರ್ದೇಶಕ ಡಾ.ಬಿ.ಎಚ್.ವಿ. ಪೈ, ಪ್ರಾಧ್ಯಾಪಕರಾದ ಡಾ.ಬಿ.ಕೆ.ಸಿಂಗ್, ನಾಗರಾಜ್ ಮುಂತಾದವರು ಅರ್ಮಾನ್ ಸಾಧನೆಗೆ ಸಾಕ್ಷಿಯಾಗಿದ್ದರು. [ಕಳ್ಳತನ ಬಯಲು ಮಾಡಿದ ಕಳ್ಳಿಯ ಸೆಲ್ಫಿ ಹುಚ್ಚು]

arman

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Arman a youngster from Mangaluru, studying in Manipal Institute of Technology (MIT) Manipal made a attempt to enter Guinness World Record by creating world longest selfie stick measuring 10.39 meters.
Please Wait while comments are loading...