ಕಂಠಪೂರ್ತಿ ಕುಡಿದು ತೋಟಕ್ಕೆ ಆ್ಯಂಬುಲೆನ್ಸ್ ನುಗ್ಗಿಸಿದ
ಉಡುಪಿ, ಮೇ 24: ಆ್ಯಂಬುಲೆನ್ಸ್ ಚಾಲಕನೋರ್ವ ಕಂಠಪೂರ್ತಿ ಮದ್ಯ ಸೇವಿಸಿ ಆ್ಯಂಬುಲೆನ್ಸ್ ನ್ನು ತೋಟಕ್ಕೆ ನುಗ್ಗಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
Recommended Video
ವಿಶಾಖಪಟ್ಟಣ ವಿಷಾನಿಲ ಸೋರಿಕೆ ಪ್ರಕರಣ: ಬೆಚ್ಚಿಬೀಳಿಸುವಂತಿದೆ ಅಲ್ಲಿನ ಪರಿಸ್ಥಿತಿ | Vizag | Gas Leak
ಉಡುಪಿಯ ಬ್ರಹ್ಮಾವರ ಸಮೀಪದ ಉಪ್ಪೂರಿನಲ್ಲಿ ಈ ಘಟನೆ ನಡೆದಿದ್ದು, ಬಹುಶಃ ಇಂದು ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವುದರಿಂದ ಮದ್ಯ ಸಿಗುತ್ತೋ ಇಲ್ಲವೋ ಎಂಬ ಕಾರಣದಿಂದ ಶನಿವಾರವೇ ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿದ್ದಾನೆ.
ಕುಡಿದು ಆ್ಯಂಬುಲೆನ್ಸ್ ಚಲಾಯಿಸಿದ ಪರಿಣಾಮವಾಗಿ ರಸ್ತೆ ಬಿಟ್ಟು ತೆಂಗಿನ ತೋಟಕ್ಕೆ ಆ್ಯಂಬುಲೆನ್ಸ್ ನುಗ್ಗಿದೆ. ಅದೃಷ್ಟವಶಾತ್ ಆ್ಯಂಬುಲೆನ್ಸ್ ನಲ್ಲಿ ಯಾವುದೇ ರೋಗಿಗಳು ಇರಲಿಲ್ಲ.

ಕೊನೆಗೆ ಸ್ಥಳದಲ್ಲಿ ಜನರು ಬಂದು ನೋಡಿದಾಗ ಈತ ಮಾತನಾಡಲು ಆಗದಷ್ಟು ಕಂಠಪೂರ್ತಿ ಕುಡಿದಿದ್ದನು. ಬ್ರಹ್ಮಾವರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications