ಉಡುಪಿ: ಆಂಬುಲೆನ್ಸ್ - ಲಾರಿ ನಡುವೆ ಭೀಕರ ಅಪಘಾತ, ಮೂವರ ಸಾವು

ಉಡುಪಿ, ಅಕ್ಟೋಬರ್ 27: ನಿನ್ನೆ ತಡ ರಾತ್ರಿ ರೋಗಿಯಬ್ಬರನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಮತ್ತು ಟ್ಯಾಂಕರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕೋಟ ಬಳಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಉಲ್ಲಾಸ್ ತಳೇಕರ್ ಎಂಬವರು ಕಳೆದ ಕೆಲವು ದಿನಗಳಿಂದ ಜಾಂಡೀಸ್ ರೋಗ ದಿಂದ ಬಳಲುತ್ತಿದ್ದು ಅವರಿಗೆ ವಿಪರೀತ ಜ್ವರ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಲು ತೆರಳುತ್ತಿದ್ದ ಸಂದರ್ಭದಲ್ಲಿಈ ಘಟನೆ ಸಂಭವಿಸಿದೆ.

ಉಲ್ಲಾಸ್ ತಳೇಕರ್ ಅವರೊಂದಿಗೆ ಅವರ ಸಂಬಂಧಿಕ ಅಮದಳ್ಳಿ ನಿವಾಸಿ ಅಶೋಕ್ ಬಾಡ್ಕರ್ (38) ಮತ್ತು ಶೈಲೇಶ್ ತಳೇಕರ್ (40) ಆಂಬುಲೆನ್ಸ್ ನಲ್ಲಿ ತೆರಳಿದ್ದರು.

Ambulance accident near Kota, 3 dead

ಆಂಬುಲೆನ್ಸ್ ಉಡುಪಿ ಸಮೀಪದ ಕೋಟದ ಮಣೂರು ಎಂದಬಲ್ಲಿ ಅಪಘಾತ ಅಂಭವಿಸಿದೆ. ಆಂಬುಲೆನ್ಸ್ ಎದುರಿನಿಂದ ಬರುತ್ತಿದ್ದ ಟ್ಯಾಂಕರಿಗೆ ಡಿಕ್ಕಿ ಹೊಡೆದ ಬಳಿಕ ಪಲ್ಟಿಯಾಗಿದೆ.ಈ ಭೀಕರ ಘಟನೆಯಲ್ಲಿ ಉಲ್ಲಾಸ್ ತಳೇಕರ್ (45) , ಅಶೋಕ್ ಬಾಡ್ಕರ್ (38) ಮತ್ತು ಶೈಲೇಶ್ ತಳೇಕರ್ (40) ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯ ಗೊಂಡ ಸರಿತಾ ತಳೇಕರ್, ರಾಘವೇಂದ್ರ ಎಂಬವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬುಲೆನ್ಸ್ ನಜ್ಜು-ಗುಜ್ಜು ಆಗಿದೆ. ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+