Get Updates
Get notified of breaking news, exclusive insights, and must-see stories!

ಉಡುಪಿಯಲ್ಲಿ ಅಬಕಾರಿ ಡಿವೈಎಸ್ಪಿ ಮನೆ ಸೇರಿ 5 ಕಡೆ ಎಸಿಬಿ ದಾಳಿ

ಉಡುಪಿ, ಮಾರ್ಚ್ 9: ಅಕ್ರಮ ಆಸ್ತಿ ಗಳಿಕೆ ದೂರಿನ ಮೇಲೆ ಮಂಗಳೂರಿನ ಡಿವೈಎಸ್ಪಿ ವಿನೋದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಎಸಿಬಿ ಎಸ್ಪಿ ಶೃತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಉಡುಪಿಯಲ್ಲಿರುವ ಅಬಕಾರಿ ಉಪ ಅಧೀಕ್ಷಕ ವಿನೋದ್ ಕಚೇರಿ ಮೇಲೂ ದಾಳಿ ನಡೆಸಲಾಗಿದೆ. ವಿನೋದ್ ಅವರ ಎಲ್ಲಾ ವ್ಯವಹಾರಗಳನ್ನು ಗಮನಿಸಿದ ತಂಡ, ಅಬಕಾರಿ ಭವನದಲ್ಲಿರುವ ವಿನೋದ್ ಅವರ ಕಚೇರಿ ಸೇರಿದಂತೆ ಡಿವೈಎಸ್ಪಿ ಅವರ ಕಾರು ಚಾಲಕ ದಿನೇಶ್ ಅವರ ಕ್ವಾಟ್ರಸ್ ಮೇಲೂ ದಾಳಿ ನಡೆಸಿದೆ.

ACB officials raids on Udupi excise DySP Vinod Kumar's houses

ಮನೆ ಮತ್ತು ಕಚೇರಿಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಿಗ್ಗೆಯಿಂದಲೇ ಕಡತ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಸಶಕ್ತ ಮಾಹಿತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಲ್ಲಾ ಫೈಲ್ ಗಳನ್ನು ತೆಗೆದುಕೊಂಡ ತಂಡ ಅವರ ಸಂಬಂಧಿಕರನ್ನೂ ಪರಿಶೀಲನೆಗೆ ಒಳಪಡಿಸಿದೆ.

ACB officials raids on Udupi excise DySP Vinod Kumar's houses

ಡಿವೈಎಸ್ಪಿ ವಿನೋದ್ ಉಡುಪಿಯ ನಾಯರ್‍ ಕೆರೆ ರಸ್ತೆಯಲ್ಲಿರುವ ಕಚೇರಿ ಹಾಗೂ ನಿವಾಸ, ಮಂಗಳೂರು ನಿವಾಸ, ಬೈಂದೂರಿನಲ್ಲಿರುವ ಮಾವನ ಮನೆ, ಕಾರ್ಕಳದ ಸಂಬಂಧಿಕರ ಮನೆ ಸೇರಿ ಒಟ್ಟು ಏಕಕಾಲದಲ್ಲಿ 5ಕಡೆ ದಾಳಿ ನಡೆಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+