ಉಡುಪಿಯಲ್ಲಿ ಯುವಕನ ಜೀವಕ್ಕೆ ಕುತ್ತು ತಂದ ಮೊಬೈಲ್ ಗೀಳು
ಉಡುಪಿ, ಅಕ್ಟೋಬರ್. 14: ಮೊಬೈಲ್ ಗೀಳು ಏನೆಲ್ಲ ಅವಾಂತರ, ದುರಂತಗಳಿಗೆ ಕಾರಣವಾಗುತ್ತದೆ ಎನ್ನುವುದಕ್ಕೆ ಉಡುಪಿಯಲ್ಲಿ ನಡೆದ ಈ ಘಟನೆ ಉದಾಹರಣೆಯಾಗಿದೆ. ಯುವಕನೋರ್ವ ಬಾವಿಕಟ್ಟೆ ಮೇಲೆ ಕೂತು ಮೊಬೈಲ್ ಫೋನ್ ನಲ್ಲಿ ಗೇಮ್ಸ್ ಆಡುವುದರಲ್ಲಿ ತಲ್ಲೀನನಾಗಿದ್ದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ.
ಉಡುಪಿ ಜಿಲ್ಲೆಯ ಬಸ್ರೂರು ಗುಂಡಿಗೋಳಿ ಬೈಲ್ ಮನೆ ಶೀನ ಪೂಜಾರಿಯವರ ಮಗ ಭಾಸ್ಕರ ಪೂಜಾರಿ (21)ಸಾವನ್ನಪ್ಪಿದ ದುರ್ದೈವಿ.
ಭಾಸ್ಕರನಿಗೆ ಮೊಬೈಲ್ ನಲ್ಲಿ ಗೇಮ್ ಆಡುವುದು ಇಷ್ಟದ ಹವ್ಯಾಸ. ಹೆಚ್ಚಿನ ಸಮಯ ಮೊಬೈಲ್ ನಲ್ಲಿ ಗೇಮ್ ಆಡುವುದರಲ್ಲೇ ಕಳೆಯುತ್ತಿದ್ದ. ಅದರಂತೆ ಭಾಸ್ಕರ್ ಮನೆ ಪಕ್ಕದ ಬಾವಿಕಟ್ಟೆಯ ಮೇಲೆ ಕುಳಿತು ಮೊಬೈಲ್ ಆಟದಲ್ಲಿ ನಿರತನಾಗಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.

ಭಾಸ್ಕರ ಪೂಜಾರಿಯ ಸಹೋದರ ರಾಘವೇಂದ್ರ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications