ಸೌದಿಯಲ್ಲಿ ಶಿರ್ವ ಮೂಲದ ನರ್ಸ್ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು

ಉಡುಪಿ, ಆಗಸ್ಟ್.06: ಸೌದಿ ಅರೇಬಿಯಾದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರ್ವ ಮೂಲದ ನರ್ಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಶಿರ್ವದ ನರ್ಸ್ ಹೆಝಲ್ ಗೆ ಸೌದಿ ಪ್ರಜೆಯೊಬ್ಬ ಕಿರುಕುಳ ನೀಡುತ್ತಿದ್ದ ಎಂಬ ಅಂಶ ಇದೀಗ ಬಯಲಾಗಿದೆ.

ಈತನ ಕಿರುಕುಳ ತಾಳಲಾರದೆ ಹೆಝಲ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಸೌದಿ ಅರೇಬಿಯಾ ಪೊಲೀಸರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಾಥಮಿಕ ತನಿಖೆ ಮಗಿಸಿದ್ದಾರೆ. ಕಿರುಕುಳ ನೀಡಿರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.

ಡೆತ್ ನೋಟ್ ನಲ್ಲೂ ಸೌದಿ ಪ್ರಜೆಯ ಕಿರುಕುಳದ ಬಗ್ಗೆ ಉಲ್ಲೇಖ ಮಾಡಿದ್ದ ನರ್ಸ್, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಜುಲೈ .19 ರಂದು ನಿಗೂಢವಾಗಿ ಸಾವನ್ನಪ್ಪಿದ್ದ ನರ್ಸ್ ಹೆಝಲ್ ಮೃತದೇಹ ಇನ್ನು ತಾಯ್ನಾಡು ತಲುಪಿಲ್ಲ. ಹೆಝಲ್ ಮೃತದೇಹ ಹುಟ್ಡೂರಿಗೆ ತರಲು ಉಡುಪಿ ಜಿಲ್ಲಾಡಳಿತದಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ.

A new turn has been found to the shirva nurse mysterious death in Saudi

ಇದೇ ವೇಳೆ ವಿಧಾನಪರಿಷತ್ ಸದಸ್ಯ ಐವನ್ ಡಿಸೋಝಾ ಅವರು ಕೂಡ ವಿದೇಶಾಂಗ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿದ್ದಾರೆ. ಇದೊಂದು ಸಂಶಯಾಸ್ಪದ ಪ್ರಕರಣವಾಗಿರೋದ್ರಿಂದ ಮತ್ತು ಸೌದಿಯಲ್ಲಿ ಕಠಿಣ ಕಾನೂನು ಇರುವ ಕಾರಣದಿಂದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಮೃತದೇಹ ಹುಟ್ಟೂರು ಶಿರ್ವಕ್ಕೆ ಬರಲಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+