ಉಡುಪಿಯಲ್ಲಿ ಕ್ವಾರಿಗೆ ಬಿದ್ದು ತಾಯಿ-ಮಗ ದುರ್ಮರಣ
40 ಅಡಿ ಆಳದ ಕಲ್ಲಿನ ಕ್ವಾರಿಯಲ್ಲಿ ತಾಯಿ ಮತ್ತು ಮಗ ಮುಳುಗಿ ಸಾವಿಗೀಡಾದ ಘಟನೆ ಉಡುಪಿಯ ಪೆರುಪೇಡ್ ಅಲೆಯೂರಿನಲ್ಲಿ ಇಂದು ನಡೆದಿದೆ.
ಉಡುಪಿ, ಏಪ್ರಿಲ್ 25: 40 ಅಡಿ ಆಳದ ಕಲ್ಲಿನ ಕ್ವಾರಿಯಲ್ಲಿ ತಾಯಿ ಮತ್ತು ಮಗ ಮುಳುಗಿ ಸಾವಿಗೀಡಾದ ಘಟನೆ ಉಡುಪಿಯ ಪೆರುಪೇಡ್ ಅಲೆಯೂರಿನಲ್ಲಿ ಇಂದು ನಡೆದಿದೆ.
ಮೃತರನ್ನು ದ್ಯಾಮವ್ವ (25) ಮತ್ತು ಅವರ ಪುತ್ರ ಹನುಮಂತ (4) ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಬಟ್ಟೆ ಒಗೆಯುವುದಕ್ಕೆಂದು ಕ್ವಾರೆಗೆ ತೆರಳಿದ್ದರು ಎನ್ನಲಾಗಿದೆ.[ಉಡುಪಿಯಲ್ಲಿ ತ್ಯಾಜ್ಯ ವಿಲೇವಾರಿಗೆ 13.5 ಕೋಟಿಯ ಮಾಸ್ಟರ್ ಪ್ಲ್ಯಾನ್]

ಮಗ ಹನುಮಂತ ನೀರಿಗೆ ಜಾರಿ ಬಿದಿದ್ದು, ಈತನನ್ನು ಉಳಿಸಲು ಪ್ರಯತ್ನಿಸುವಾಗ ಆತನ ತಾಯಿ ಕೂಡ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications