ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1 ಲಕ್ಷ ಮೌಲ್ಯದ ನಾಯಿ ಮರಿ ಖರೀದಿಸಿದ ಉಡುಪಿಯ ಶ್ವಾನ ಪ್ರೇಮಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್‌ 6: ಉಡುಪಿ ಜಿಲ್ಲೆಗೆ ಅಪರೂಪದ ನಾಯಿ ಮರಿಯೊಂದರ ಆಗಮನವಾಗಿದೆ. ದಕ್ಷಿಣ ಆಫ್ರಿಕಾ ಮೂಲದ ರೊಡೇಶಿಯನ್ ರಿಡ್ಜ್ ಬ್ಯಾಕ್ ತಳಿಯ 42 ದಿನಗಳ ಗಂಡು ನಾಯಿ ಮರಿ ಇದಾಗಿದ್ದು, ಕರ್ನಾಟಕದ ಕ್ಯಾನಲ್ ಕ್ಲಬ್‌ನಲ್ಲಿ ನೋಂದಣಿ ಪಡೆದ ಏಕೈಕ ನಾಯಿ ಇದಾಗಿದೆ.

1,10,000 ರೂಪಾಯಿ ನೀಡಿ ಉಡುಪಿಯ ಅಜ್ಜರಕಾಡು ನಿವಾಸಿ ವಿಶ್ವನಾಥ್ ಕಾಮತ್ ಇದನ್ನು ಖರೀದಿಸಿದ್ದಾರೆ. ಚೆನ್ನೈ ಮೂಲದ ವಿವೇಕ್ ಎಂಬವರು ದಕ್ಷಿಣ ಆಫ್ರಿಕಾದ ನೋಂದಣಿ ಹೊಂದಿರುವ ಅಪರೂಪದ ತಳಿಯ ನಾಯಿ ಮರಿಗಳನ್ನು ಚೆನೈಗೆ ತಂದು ಬ್ರೀಡ್ ಮಾಡಿದ್ದಾರೆ. ಅವರಿಂದ ವಿಶ್ವನಾಥ್, ಖರೀದಿಸಿ ಚೆನೈನಿಂದ ರೈಲಿನ ಮೂಲಕ ಉಡುಪಿಗೆ ತಂದಿದ್ದಾರೆ.

ಚೀನಾದಲ್ಲಿ ಫೇಮಸ್ ಆದ ವಾಕಿಂಗ್ ರೋಬೋ ನಾಯಿಗಳು: ಬೆಲೆ ಎಷ್ಟು?ಚೀನಾದಲ್ಲಿ ಫೇಮಸ್ ಆದ ವಾಕಿಂಗ್ ರೋಬೋ ನಾಯಿಗಳು: ಬೆಲೆ ಎಷ್ಟು?

ಈ ನಾಯಿಗೆ ಆಫ್ರಿಕನ್ ಲಯನ್ ಡಾಗ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ವಿಪರೀತ ಸಿಟ್ಟಿನ ನಾಯಿ ತಳಿ ಇದಾಗಿದ್ದು, ಒಂದೇ ತಳಿಯ ನಾಲ್ಕು ನಾಯಿಗಳು ಒಟ್ಟಿಗೆ ಸೇರಿದರೇ ಸಿಂಹವನ್ನು ಕೊಲ್ಲುವ ತಾಕತ್ತು ಇದಕ್ಕಿದೆ. ಹೀಗಾಗಿ ಲಯನ್ ಡಾಗ್ ಎಂಬ ಹೆಸರು ಕೂಡ ಇದೆ.

 A Dog Lover From Ajjarkad Bought A Puppy Worth One Lakh Rupees

ಕಳೆದ 25 ವರ್ಷಗಳಿಂದ ವಿವಿಧ ತಳಿಯ ನಾಯಿಯನ್ನು ಸಾಕುತ್ತಿರುವ ವಿಶ್ವನಾಥ್ ಕಾಮತ್ ಮತ್ತು ಅವರ ಪತ್ನಿ ಪ್ರಿಯಾ ಕಾಮತ್ ಪ್ರಸ್ತುತ 9 ನಾಯಿಗಳನ್ನು ಸಾಕುತ್ತಿದ್ದಾರೆ. ಅಮೆರಿಕನ್ ಬುಲ್ಲಿ, ಡಾಬರ್ ಮ್ಯಾನ್, ಲ್ಯಾಬ್ಯೋಡರ್, ಪಗ್ ಸೇರಿದಂತೆ ವಿವಿಧ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ನಾಯಿಯ ಭುಜದಿಂದ ಸೊಂಟದವರೆಗೆ 2 ಅಗಲದ ನೇರ ರೋಮಗಳಿದೆ. ಇದು ಈ ನಾಯಿಯ ಆಕರ್ಷಣೆಯ ಪ್ರಮುಖ ಭಾಗವಾಗಿದೆ.

 A Dog Lover From Ajjarkad Bought A Puppy Worth One Lakh Rupees

ಈಗಾಗಲೇ ತಮ್ಮ ಡಾಬರ್ ಮನ್ ತಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ವಿಶ್ವನಾಥ ಕಾಮತ್, ತಮ್ಮ ನೂತನ ರೊಡೇಶಿಯನ್ ರಿಡ್ಜ್ ಬ್ಯಾಕ್ ಅನ್ನೂ ಸ್ಪರ್ಧೆಗೆ ತಯಾರು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಪೂರ್ಣ ಬೆಳೆದ ಗಂಡು ನಾಯಿ 19 ರಿಂದ 26 ಇಂಚು ಎತ್ತರ,45 ಕೆ.ಜಿಯವರೆಗೂ ತೂಕ ಬರುತ್ತದೆ.

ರಸ್ತೆ ಅಪಘಾತದಲ್ಲಿ ಸಾಕು ನಾಯಿ ಗಾಯಗೊಳಿಸಿದರೆ ಅಪರಾಧವಲ್ಲ- ಹೈಕೋರ್ಟ್ ರಸ್ತೆ ಅಪಘಾತದಲ್ಲಿ ಸಾಕು ನಾಯಿ ಗಾಯಗೊಳಿಸಿದರೆ ಅಪರಾಧವಲ್ಲ- ಹೈಕೋರ್ಟ್

ಈ ನಾಯಿ 10 ರಿಂದ 13 ವರ್ಷಗಳ ಕಾಲ ಬದುಕುತ್ತದೆ. ವಿಪರೀತ ಸಿಟ್ಟು ಹೊಂದಿದ ಈ ನಾಯಿ ಬೇಟೆ ಮತ್ತು ಕಾವಲಿಗೆ ಸೂಕ್ತವಾಗಿದೆ. ಬಹಳ ಬುದ್ದಿವಂತ ಮತ್ತು ಸಂವೇದನಾಶೀಲವಾಗಿದ್ದು ನಿಷ್ಠೆಯನ್ನು ಹೊಂದಿದೆ ಎಂದು ವಿಶ್ವನಾಥ ನಾಯಕ್ ಹೇಳಿದ್ದಾರೆ.

ಜಿಂಬಾಬ್ವೆ ದೇಶದ ರೊಡೇಶಿಯನ್ ಪ್ರದೇಶ ಮೂಲದ ಶ್ವಾನ ಇದಾಗಿದ್ದು, ಹೀಗಾಗಿ ಈ ತಳಿಗೆ ರೊಡೇಶಿಯನ್ ರಿಡ್ಜ್ ಬ್ಯಾಕ್ ಎಂಬ ಹೆಸರು ಬಂದಿದೆ. ಜಿಂಬಾಬ್ವೆ ದೇಶದ ರಾಷ್ಟ್ರೀಯ ಪ್ರಾಣಿ ಯೂ ರೊಡೇಶಿಯನ್ ರಿಡ್ಜ್ ಬ್ಯಾಕ್ ಶ್ವಾನವಾಗಿದೆ.

English summary
A dog lover from Ajjarkad, Udupi bought a puppy worth one Lakh rupees
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X