800 ಕಾರ್ಮಿಕರಿಂದ ಸುಜ್ಲಾನ್ ಕಂಪೆನಿಗೆ ಮುತ್ತಿಗೆ, ಪರಿಸ್ಥಿತಿ ಉದ್ವಿಗ್ನ

By: ಉಡುಪಿ ಪ್ರತಿನಿಧಿ
Subscribe to Oneindia Kannada

ಉಡುಪಿ, ಎಪ್ರಿಲ್ 11 : ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಸುಜ್ಲಾನ್ ಕಂಪೆನಿಯಿಂದ 800 ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದನ್ನು ಖಂಡಿಸಿ ನಿನ್ನೆಯಿಂದ ಪ್ರತಿಭಟನೆ ಮಾಡುತ್ತಿರುವ ನೌಕರರು ಮಂಗಳವಾರ ಕಚೇರಿಗೇ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.

ಹೀಗಾಗಿ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿರುವ ಗಾಳಿಯಂತ್ರದ ರೆಕ್ಕೆ ತಯಾರಿಸುವ ಸುಜ್ಲಾನ್ ಕಂಪೆನಿ ಸುತ್ತ- ಮುತ್ತ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ತಕ್ಷಣ ಸ್ಥಳಕ್ಕೆ ಬಂದ ಪೋಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.[ಅಂತೂ ಇಂತೂ ಉಡುಪಿಯ ಚಿರತೆ ಬೋನಿಗೆ ಬಿತ್ತು!]

800 workers attacked on Suzlon Company in Udupi

ಸುಜ್ಲಾನ್ ಸುತ್ತ ಮುತ್ತ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಮನಗಂಡ ಶಾಸಕ ವಿನಯ್ ಕುಮಾರ್ ಸೊರಕೆ ಸ್ಥಳಕ್ಕೆ ಆಗಮಿಸಿ ಕಾರ್ಮಿಕರನ್ನು ಮನವೊಲಿಸುವ ಕೆಲಸ ನಡೆಸಿದರು.

'ಯುನಿಟೆಕ್' ಮತ್ತು 'ಎಸ್‍ಎಸ್‍ಪಿಎಲ್‍' ಸುಜ್ಲಾನ್ ಕಂಪೆನಿಯ ಗುತ್ತಿಗೆ ವಹಿಸಿದ್ದು, ಕಂಪೆನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರನ್ನು ಮುನ್ಸೂಚನೆ ನೀಡದೆ ಎರಡು ದಿನಗಳ ಹಿಂದೆ ಏಕಾಏಕಿ ವಜಾಗೊಳಿಸಲಾಗಿತ್ತು.[ಉಡುಪಿ ಡಿಸಿ ಕೊಲೆ ಯತ್ನ ಕೇಸ್: ಬಂಧಿತರ ಸಂಖ್ಯೆ 20ಕ್ಕೆ ಏರಿಕೆ]

800 workers attacked on Suzlon Company in Udupi

ಸೋಮವಾರ ಈ ಎಲ್ಲಾ ಕಾರ್ಮಿಕರು ಕೆಲಸ ಮಾಡಲು ಬಂದಾಗ ಕಾರ್ಮಿಕರಿಗೆ ಹಾಜರಾತಿ ಪುಸ್ತಕ ನೀಡಲು ನಿರಾಕರಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಕೆಲಸದಿಂದ ಏಕಾ-ಏಕಿ ಮುನ್ಸೂಚನೆ ನೀಡದೆ ವಜಾಗೊಳಿಸಿರುವುದನ್ನು ವಿರೋಧಿಸಿ ಕಂಪೆನಿಯ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
800 workers attacked on Suzlon company in Padubidri, Udupi. Workers protested as they were thrown out of office without a single reason. Police deployed out side the company and taken control of the situation.
Please Wait while comments are loading...