ಉಡುಪಿಯಿಂದ ಐನೂರು ವಲಸೆ ಕಾರ್ಮಿಕರಿಗೆ ಊರಿಗೆ ಮರಳುವ ಭಾಗ್ಯ

ಉಡುಪಿ, ಏಪ್ರಿಲ್ 25: ಕೊರೊನಾ ಲಾಕ್ ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಉಡುಪಿಯಿಂದ ಐನೂರಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ಊರುಗಳಿಗೆ ಕಳಿಸಲಾಯಿತು.

ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ವಲಸೆ ಕಾರ್ಮಿಕರನ್ನು ಅವರ ತವರಿಗೆ ತೆರಳಲು ಅವಕಾಶ ಕಲ್ಪಿಸಿತು. ಉಡುಪಿ, ಬಾರ್ಕೂರು ಸಹಿತ ನಿರಾಶ್ರಿತರ ಶಿಬಿರಗಳಲ್ಲಿ 500ಕ್ಕೂ ವಲಸೆ ಕಾರ್ಮಿಕರಿದ್ದರು. ಲಾಕ್ ಡೌನ್ ಬಳಿಕ ಇವರಿಗೆ ಎರಡು ಹೊತ್ತಿನ ಊಟವನ್ನು ಜಿಲ್ಲಾಡಳಿತ ನೀಡುತ್ತಿತ್ತು.ಇದಕ್ಕಾಗಿ ಜಿಲ್ಲಾಡಳಿತ ಇಪ್ಪತ್ತು ಸರ್ಕಾರಿ ಬಸ್ಸುಗಳನ್ನು ವ್ಯವಸ್ಥೆ ಮಾಡಿತ್ತು.

500 Workers Went To Their Hometowns From Udupi

ನಗರದ ಬೋರ್ಡ್ ಶಾಲಾ ಆವರಣದಲ್ಲಿ ಅತೀ ಹೆಚ್ಚು ವಲಸೆ ಕಾರ್ಮಿಕರು ಕಳೆದ ಕೆಲ ದಿನಗಳಿಂದ ಆಶ್ರಯ ಪಡೆದಿದ್ದರು. ಶಿಬಿರದಲ್ಲಿ ಬಾಗಲಕೋಟೆ, ಕೊಪ್ಪಳ, ಬೆಳಗಾವಿ, ಧಾರವಾಡ ಜಿಲ್ಲೆಗಳ ಕಾರ್ಮಿಕರಿದ್ದರು. ಬಸ್ ಗಳಲ್ಲಿ ತೆರಳುವಾಗ ಮುಂಜಾಗರೂಕತಾ ಕ್ರಮವಾಗಿ ಸ್ಯಾನಿಟೈಸರ್, ಮಾಸ್ಕ್, ಫುಡ್ ಕಿಟ್ ನೀಡಿ ಜಿಲ್ಲಾಡಳಿತ ಇವರನ್ನು ಬೀಳ್ಕೊಟ್ಟಿತು. ತಮ್ಮ ಊರುಗಳಿಗೆ ತೆರಳುವ ವಲಸಿಗರ ಮೊಗದಲ್ಲಿ ಮಂದಹಾಸ ಕಂಡುಬಂದಿದ್ದಲ್ಲದೆ, ಕೆಲವರು ಭಾವುಕರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+