ಉಡುಪಿ ರೈಲ್ವೇ ನಿಲ್ದಾಣದಲ್ಲಿ 1.66 ಕೋಟಿ ರೂ.ಸಾಗಾಟ, ಮೂವರು ವಶಕ್ಕೆ
ಉಡುಪಿ, ನವೆಂಬರ್.02: ಉಡುಪಿ ರೈಲ್ವೇ ನಿಲ್ದಾಣದಲ್ಲಿ 1.66 ಕೋಟಿ ರೂಪಾಯಿ ಹಣ ಸಾಗಾಟ ಪತ್ತೆಯಾಗಿದೆ. ಶಿವಮೊಗ್ಗ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಹಣ ಸಾಗಾಟ ಇದೀಗ ಭಾರೀ ಗಮನ ಸೆಳೆದಿದೆ.
ಮುಂಬೈಯಿಂದ ಕೇರಳಕ್ಕೆ ಹೋಗುವ 16345 ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಹಣ ಸಾಗಾಟ ನಡೆದಿದ್ದು, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸದ್ಯ ಮೂವರನ್ನು ವಶಕ್ಕೆ ಪಡೆದು ರೈಲ್ವೇ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಣಿಪಾಲ ಹಾಗೂ ರೈಲ್ವೆ ಪೊಲೀಸರಿಂದ ವಿಚಾರಣೆ ಮುಂದುವರಿದಿದ್ದು, ಹಣ ಸಾಗಾಟ ಮಾಡುತ್ತಿದ್ದವರು ರಾಜಸ್ಥಾನ ಮೂಲದವರು ಎಂದು ತಿಳಿದುಬಂದಿದೆ. ಆರೋಪಿಗಳು ಜಾಗ ಖರೀದಿಗಾಗಿ ಹಣ ತಂದಿರುವುದಾಗಿ ಹೇಳುತ್ತಿದ್ದಾರೆ.

ಪೊಲೀಸರು ಹವಾಲಾ ಹಣ ಅಕ್ರಮ ಸಾಗಾಟದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದು, ಚುನಾವಣೆಗೂ ಹಾಗೂ ಈ ಅಕ್ರಮ ಹಣ ಸಾಗಾಟಕ್ಕೂ ಸಂಬಂಧ ಇದೆಯಾ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.












Click it and Unblock the Notifications