Turuvekere Elections: ತ್ರಿಕೋನ ಸ್ಪರ್ಧೆಗೆ ಸಾಕ್ಚಿಯಾಗುತ್ತಾ ತುರುವೇಕೆರೆ ಕ್ಷೇತ್ರ?
ತುಮಕೂರು, ಮಾರ್ಚ್. 26: ಮಂಡ್ಯ, ಹಾಸನ, ತುಮಕೂರು ಹೀಗೆ ಮೂರು ಕಡೆಯಿಂದ ಸುತ್ತುವರೆದಿರುವ ತುರುವೇಕೆರೆ ಕ್ಷೇತ್ರ ರಾಜಕೀಯವಾಗಿ ಹಲವು ವೈಶಿಷ್ಟ್ಯ ಹೊಂದಿದೆ. ಕಳೆದ ಮೂರು ಚುನಾವಣೆಗಳಲ್ಲಿ ಮೂರು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಆಯ್ಕೆಯಾಗಿವೆ. ಪಕ್ಷಗಳನ್ನು ಬಿಟ್ಟು ನೋಡಿದರೇ ಜಾತಿ ಪ್ರಾಬಲ್ಯ ಎದ್ದು ಕಾಣಿಸುತ್ತದೆ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದ ಮಸಾಲ ಜಯರಾಮ್ ಆಯ್ಕೆಯಾಗಿದ್ದಾರೆ. ಜಾತ್ಯತೀತ ಜನತಾ ದಳದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಸುಮಾರು ಎರಡು ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ. ಈ ಬಾರಿಯೂ ಬಿಜೆಪಿಯಿಂದ ಮಸಾಲ ಜಯರಾಮ್ ಕಣಕ್ಕಿಳಿಯಲಿದ್ದು, ಜೆಡಿಎಸ್‌ನಿಂದ ಎಂ.ಟಿ.ಕೃಷ್ಣಪ್ಪ ಕಣಕ್ಕೆ ಇಳಿಯಲಿದ್ದಾರೆ. ಇವರೊಂದಿಗೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಬೆಮಲ್ ಕಾಂತರಾಜ್‌ಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

*ತುರುವೇಕೆರೆ ಇತಿಹಾಸ*
ದಕ್ಷಿಣದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ, ನೈಋತ್ಯದಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ, ಪಶ್ಚಿಮ ಮತ್ತು ಉತ್ತರದಲ್ಲಿ ತಿಪಟೂರು, ಈಶಾನ್ಯ ಮತ್ತು ಪೂರ್ವದಲ್ಲಿ ಗುಬ್ಬಿ, ಆಗ್ನೇಯದಲ್ಲಿ ಕುಣಿಗಲ್ ತಾಲೂಕುಗಳಿಂದ ಸುತ್ತುವರೆದಿದೆ ತುರುವೇಕೆರೆ. ತಾಲೂಕಿನಲ್ಲಿ ತುರುವೇಕೆರೆ,ದಂಡಿನಶಿವರ, ಮಾಯಸಂದ್ರ ಮತ್ತು ದಬ್ಬೆಘಟ್ಟ ಹೋಬಳಿಗಳಿವೆ. ತುರುವೇಕೆರೆ ಮತ್ತು ಅಮ್ಮಸಂದ್ರ ಪಟ್ಟಣಗಳನ್ನು, 233 ಗ್ರಾಮಗಳನ್ನು ಒಳಗೊಂಡಿದೆ.
ತುರುವೆಕೇರೆಯ ಹೊಸಹಳ್ಳಿಯಲ್ಲಿ ಹೊಯ್ಸಳರ ಕಾಲದ ಕಲ್ಲೇಶ್ವರ ದೇವಾಲಯವಿದೆ. ಕಡಸೂರಿನಲ್ಲಿ ಭೈರವ ದೇವಾಲಯ, ಮಾಯಸಂದ್ರದಲ್ಲಿ ಮಾಯಮ್ಮ, ಕೊಲ್ಲಾಪುರದಮ್ಮ ದೇವಾಲಯಗಳಿವೆ. ಮಾಯಸಂದ್ರಕ್ಕೆ ಹತ್ತಿರವಿರುವ ರಾಮಸಾಗರದಲ್ಲಿರುವ ವರದರಾಜ ದೇವಾಲಯ ಹೆಸರಾದ್ದು. ನಾಗಲಾಪುರದಲ್ಲಿ ಹೊಯ್ಸಳರ ಕಾಲದ ಪಾಳುಬಿದ್ದಿರುವ ವಿಷ್ಣು ಮತ್ತು ಶಿವ ದೇವಾಲಯಗಳಿವೆ. ಸೂಳೆಕೆರೆಯಲ್ಲಿ ಹೊಯ್ಸಳ ಶೈಲಿಯ ಈಶ್ವರ ದೇವಾಲಯವೂ ವೀರಭದ್ರನ ದೇವಸ್ಥಾನವೂ ಇದೆ. ತುಮಕೂರಿನ ದೇವರಾಯನ ದುರ್ಗದಲ್ಲಿ ಹುಟ್ಟುವ ಶಿಂಷಾ ನದಿ ಗುಬ್ಬಿ ತಾಲ್ಲೂಕಿನ ಮೂಲಕ ಹರಿದು, ತುರುವೇಕೆರೆಗೂ ಪ್ರವೇಶಿಸುತ್ತದೆ.

ತಾಲೂಕಿನಲ್ಲಿ ದೊಡ್ಡ ಕೈಗಾರಿಕೆಯೆಂದರೆ ಸಿಮೆಂಟ್ ತಯಾರಿಕೆ. ದಂಡಿನಶಿವರ ಹೋಬಳಿಯಲ್ಲಿರುವ ಈ ಕಾರ್ಖಾನೆ ತುರುವೇಕೆರೆ ಪಟ್ಟಣದಿಂದ 19 ಕಿ ಮೀ ದೂರದಲ್ಲಿದೆ. ವಿದ್ಯುತ್ತು, ಕಚ್ಚಾಸಾಮಗ್ರಿ, ಕಾರ್ಮಿಕರ ಸರಬರಾಜು, ಸಾರಿಗೆ ಈ ಎಲ್ಲ ಸೌಲಭ್ಯಗಳನ್ನೂ ಪಡಿದಿರುವ ಈ ಸ್ಥಳದಲ್ಲಿ ಸಿಮೆಂಟ್ ಕಾರ್ಖಾನೆ 1960ರಲ್ಲಿ ಸ್ಥಾಪಿತವಾಗಿದೆ. ಕೈಗಾರಿಕೆಗೆ ಅಗತ್ಯವಾದ ಮುಖ್ಯ ಕಚ್ಚಾ ಸಾಮಗ್ರಿಯಾದ ಸುಣ್ಣಕಲ್ಲು ಇಲ್ಲಿ ಹೇರಳವಾಗಿ ದೊರೆಯುತ್ತದೆ.
*ತುರುವೇಕೆರೆ ರಾಜಕೀಯ*
ತುರುವೇಕೆರೆಯಲ್ಲಿ ಮೈಸೂರು ರಾಜ್ಯ ಅಸ್ವಿತ್ವದಲ್ಲಿದಾಗ 1957ರಲ್ಲಿ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಟಿ. ಸುಬ್ರಹ್ಮಣ್ಯ ಗೆಲುವು ಸಾಧಿಸಿದ್ದರು. ಇವರಾದ ಮೇಲೆ 1962 ರಲ್ಲಿ ಬಿ. ಹುಚ್ಚೇಗೌಡ ಅದೇ ಪಕ್ಷದಿಮದ ಆಯ್ಕೆಯಾದರು. 1967 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಎಂ ಎನ್ ರಾಮಣ್ಣ, 1972 ರಲ್ಲಿ ಬಿ. ಭೈರಪ್ಪಾಜಿ ಆಯ್ಕೆಯಾಗಿದ್ದರು.
ಕರ್ನಾಟಕ ರಾಜ್ಯ ರಚನೆಯಾದ ಮೇಲೆ 1978 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಪಕ್ಷದ ಕೆ. ಎಚ್. ರಾಮಕೃಷ್ಣಯ್ಯ, 1983 ರಲ್ಲಿ ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಬಿ. ಭೈರಪ್ಪಾಜಿ ಆಯ್ಕೆಯಾದರು. 1985 ರಲ್ಲಿ ಜನತಾ ಪಕ್ಷದ ಕೆ.ಎಚ್.ರಾಮಕೃಷ್ಣಯ್ಯ, 1989 ರಲ್ಲಿ ಕಾಂಗ್ರೆಸ್‌ನ ಎಸ್. ರುದ್ರಪ್ಪ , 1994 ರಲ್ಲಿ ಜನತಾ ಪಕ್ಷದ ಎಚ್.ಬಿ.ನಂಜೇಗೌಡ ಶಾಸಕರಾಗಿದ್ದಾರೆ.

1999 ರಲ್ಲಿ ಭಾರತೀಯ ಜನತಾ ಪಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಶಾಸಕರಾಗಿ ಆಯ್ಕೆಯಾದರು. ಇದಾದ ನಂತರ 2004ರಲ್ಲಿ ಜನತಾ ದಳ (ಜಾತ್ಯತೀತ)ದ ಎಂ.ಟಿ.ಕೃಷ್ಣಪ್ಪ ಜೆಡಿಎಸ್‌ಗೆ ಬುನಾದಿ ಹಾಕಿದ್ದರು. ಇದನ್ನು 2008 ರಲ್ಲಿ ಚಿತ್ರನಟ ಜಗ್ಗೇಶ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ಜೆಡಿಎಸ್ ಕೋಟೆಯನ್ನು ಅಲುಗಾಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು. ಆದರೆ, ಒಂದೇ ತಿಂಗಳಲ್ಲಿ ಆಪರೇಷನ್ ಕಮಲಕ್ಕೆ ಒಳಗಾದರು.
ಬಳಿಕ ನಡೆದ 2008ರ ಉಪ-ಚುನಾವಣೆಯಲ್ಲಿ ಎಂ.ಟಿ.ಕೃಷ್ಣಪ್ಪ ಮತ್ತೆ ಅಧಿಕಾರಕ್ಕೆ ಬಂದರು. 2013ರಲ್ಲೂ ಎಂ.ಟಿ.ಕೃಷ್ಣಪ್ಪ ಜಯಭೇರಿ ಬಾರಿಸಿದ್ದರು. ಆದರೆ, 2018 ರಲ್ಲಿ ಮೊದಲ ಬಾರಿಗೆ ಬಿಜೆಪಿಯಿಂದ ಚುನಾವಣೆ ಎದುರಿಸಿದ ಮಸಾಲ ಜಯರಾಮ್ ಗೆಲುವು ದಾಖಲಿಸಿದರು. ಈ ಬಾರಿಯೂ ಬಿಜೆಪಿ ಮಸಲಾ ಜಯರಾಮ್‌ಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಈಗಾಗಲೇ ಅವರ ಬೆಂಬಲಿಗರು ಪಕ್ಷದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಯಾಗಿರುವ ಮಸಾಲ ಜಯರಾಮ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿದ್ದಾರೆ.
Turuvekere Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಮಸಾಲ ಜಯರಾಮ್ | 60710 | ಎಂ ಟಿ ಕೃಷ್ಣಪ್ಪ | 58661 |
| 2013 | ಎಂ ಟಿ ಕೃಷ್ಣಪ್ಪ | 66089 | ಮಸಾಲ ಜಯರಾಮ್ | 57164 |
| 2008 | ಜಗ್ಗೇಶ್ | 47849 | ಎಂ ಡಿ ಲಕ್ಷ್ಮೀನಾರಾಯಣ [ಅಣ್ಣಯ್ಯ] | 38323 |
ಇನ್ನು, ಕಾಂಗ್ರೆಸ್ ಈಗಾಗಲೇ ಟಿಕೆಟ್ ಘೋಷಣೆ ಮಾಡಿದ್ದು, ಬೆಮಲ್ ಕಾಂತರಾಜ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. 2022ರ ಜನವರಿಯಲ್ಲಿ ತುಮಕೂರು ಜಿಲ್ಲೆಯ ಪ್ರಭಾವಿ ಜೆಡಿಎಸ್ ನಾಯಕ ಬೆಮಲ್ ಕಾಂತರಾಜ್ ಕಾಂಗ್ರೆಸ್ ಸೇರಿದ್ದರು. ವಿಧಾನ ಪರಿಷತ್‌ನ ಮಾಜಿ ಸದಸ್ಯರಾಗಿದ್ದ ಅವರು ಪರಿಷತ್ ಚುನಾವಣೆಯಲ್ಲಿ ಟಿಕೆಟ್ ತ್ಯಾಗ ಮಾಡಿದ್ದರು. ಒಕ್ಕಲಿಗ ಸಮುದಾಯಕ್ಕೆ ಸೇರಿದ ಬೆಮಲ್ ಕಾಂತರಾಜ್ 2021ರ ಸೆಪ್ಟೆಂಬರ್‌ನಲ್ಲಿಯೇ ಜೆಡಿಎಸ್ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿದ್ದರು. ಹೊಸದಾಗಿ ಪಕ್ಷ ಸೇರಿರುವ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಜೆಡಿಎಸ್ ಮೂರು ಬಾರಿ ಆಯ್ಕೆಯಾಗಿರುವ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರಿಗೆ ಟಿಕೆಟ್ ನೀಡಿದೆ. ಆದರೆ, ಈ ಬಾರಿ ಜೆಡಿಎಸ್‌ಗೆ ಟಕ್ಕರ್ ಕೊಡಲು, ಜೆಡಿಎಸ್ ಮತಗನ್ನು ವಿಭಜಿಸಲು ಕಾಂಗ್ರೆಸ್ ಪ್ರಭಾವಿ ಜೆಡಿಎಸ್ ನಾಯಕ ಬೆಮಲ್ ಕಾಂತರಾಜ್ ಅವರಿಗೆ ಟಿಕೆಟ್ ನೀಡಿದೆ. ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಕ್ಕಲಿಗ ಶಾಸಕರೇ ಅತಿ ಹೆಚ್ಚಾಗಿದ್ದಾರೆ. ಹೀಗಾಗಿ ಜಾತಿ ರಾಜಕೀಯವಾಡಲು ಪಕ್ಷಗಳು ರಣತಂತ್ರ ಹೂಡುತ್ತಿವೆ.
*ಮತದಾರರು*
ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವೆಯಲ್ಲಿರು ಮತದಾರರು ಸೇರಿದಂತೆ ಒಟ್ಟು 1,80,566 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 90,519 ಪುರುಷರು, 89,995 ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತ ಮತದಾರರು 8 ಮಂದಿ ಇದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications