ತುಮಕೂರಿನ ನಾರಿಕೇಳದ ಮೇಲೆ ಮುಕ್ಕಣ್ಣನ ಕಣ್ಣು!
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬದಲ್ಲಿ ತೆಂಗಿನ ಕಾಯಿಯ ಮೇಲೆ ಕಣ್ಣಿನ ಆಕಾರ ಸ್ಪಷ್ಟವಾಗಿ ಮೂಡಿರುವುದು ಅಚ್ಚರಿ ಸೃಷ್ಟಿಸಿದೆ.
ತುಮಕೂರು, ಏಪ್ರಿಲ್ 17: ಪ್ರಕೃತಿ ಯಾವತ್ತಿದ್ದರೂ ಅಚ್ಚರಿಗಳ ಸಂತೆ. ಅದಕ್ಕೆ ಸಾಕ್ಷಿಯಾಗುವಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬದಲ್ಲೊಂದು ವಿಚಿತ್ರ ಸಂಭವಿಸಿದೆ. ಉಮೇಶ್ ಎಂಬುವವರು ಸುಲಿದ ತೆಂಗಿನ ಕಾಯಿಯಲ್ಲಿ ಕಣ್ಣಿನ ಆಕಾರ ಸ್ಪಷ್ಟವಾಗಿ ಮೂಡಿರುವುದು ಅಚ್ಚರಿ ಸೃಷ್ಟಿಸಿದೆ.
ದೇವರೇ ಕಣ್ಣು ಬಿಟ್ಟಿದ್ದಾನಾ..? ಇದು ಮುಕ್ಕಣ್ಣ ಶಿವನ ಕೃಪೆಯಾ? ತೆಂಗಿನ ಬೆಳೆಗಾರರಿಗೆ ಇದು ಶುಭ ಸೂಚನೆಯಾ? ಅಥವಾ ದುರಂತದ ಮುನ್ಸೂಚನೆಯಾ ಎಂಬೆಲ್ಲ ಮಾತುಗಳು ಈಗ ತೆಂಗಿನ ಕಾಯಿಯ ಸುತ್ತ ಹರಿದಾಡುತ್ತಿವೆ.

ಈ ಮುಕ್ಕಣ್ಣನ ತೆಂಗಿನ ಕಾಯಿ ನೋಡುವುದಕ್ಕಾಗಿಯೇ ಹಲವರು ಆಗಮಿಸುತ್ತಿದ್ದು, ಇಷ್ಟರಲ್ಲೇ ಅಡುಗೆಯ ಭಾಗವಾಗಿ ಯಾರದೋ ಹೊಟ್ಟೆ ಸೇರಬೇಕಿದ್ದ ತೆಂಗಿನ ಕಾಯಿ ಸೆಲೆಬ್ರಿಟಿಯಾಗಿ ಬದಲಾಗಿದೆ!













Click it and Unblock the Notifications