ಅಂಧತ್ವಕ್ಕೆ ಸವಾಲು: ಯುಪಿಎಸ್ಸಿಯಲ್ಲಿ ಯಶಸ್ಸು ಗಳಿಸಿದ ಕೆಂಪಹೊನ್ನಯ್ಯ
ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಮೂಲಕದ ಕೆಂಪಹೊನ್ನಯ್ಯ ಅವರು ಯುಪಿಎಸ್ ಸಿ ಯಲ್ಲಿ 340ನೇ ಸ್ಥಾನಗಳಿಸಿದ್ದಾರೆ. ಅಂಧತ್ವಕ್ಕೆ ಸವಾಲು ಹಾಕಿ ಯಶ ಪಡೆದಿದ್ದಾರೆ
ತುಮಕೂರು, ಜೂನ್ 01 : ಮೈಸೂರಿನ ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿರುವ ತುಮಕೂರು ಮೂಲಕದ ಕೆಂಪಹೊನ್ನಯ್ಯ ಅವರು ಯುಪಿಎಸ್ ಸಿ ಯಲ್ಲಿ 340ನೇ ಸ್ಥಾನಗಳಿಸಿದ್ದಾರೆ. ಅಂಧತ್ವಕ್ಕೆ ಸವಾಲು ಹಾಕಿ ಯಶ ಪಡೆದಿದ್ದಾರೆ. ಕೆಂಪಹೊನ್ನಯ್ಯ ಅವರ ಸಾಧನೆಯತ್ತ ಒಂದು ನೋಟ ಇಲ್ಲಿದೆ...
'ಯಶಸ್ಸು ಸಿಗುವ ತನಕ ಮರಳಿ ಯತ್ನವಾ ಮಾಡು..' ಎಂಬ ವಾಕ್ಯದ ಮೇಲೆ ನಂಬಿಕೆ ಇರಿಸಿಕೊಂಡಿರುವ ಕೆಂಪಹೊನ್ನಯ್ಯ ಅವರು ಮೂರನೇ ಬಾರಿಗೆ ಕೇಂದ್ರ ಲೋಕಸೇವಾ ಆಯೋಗ(ಯು ಪಿಎಸ್ ಸಿ) ಪರೀಕ್ಷೆಯಲ್ಲಿ ಯಶಸ್ಸುಗಳಿಸಿದ್ದಾರೆ.

ಕನ್ನಡದಲ್ಲೇ ಯುಪಿ ಎಸ್ ಸಿ ಪರೀಕ್ಷೆ: 'ಯುಪಿಎಸ್‌ಸಿ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆದಿದ್ದೇನೆ, ಸಂದರ್ಶವನ್ನು ಕನ್ನಡದಲ್ಲಿಯೇ ನಡೆಸಲಾಯಿತು. ಈ ರ‍್ಯಾಂಕ್ ಖುಷಿ ನೀಡಿದೆ' ಎಂದು ಕೆಂಪಹೊನ್ನಯ್ಯ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆ ಜತೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ನನ್ನ ಯಶಸ್ಸಿನಲ್ಲಿ ಪತ್ನಿ ಅಂಚಿತಾ ಪಾಲು ಅಧಿಕ. ನನಗೆ ಓದಲು, ನೋಟ್ಸ್ ಮಾಡಿಕೊಡಲು, ರೆಕಾರ್ಡಿಂಗ್ ಕೇಳಿಸುವ ಸಹಾಯ ಮಾಡಿದರು ಎಂದು ಕೆಂಪಹೊನ್ನಯ್ಯ ಹೇಳಿದ್ದಾರೆ.
ಮೈಸೂರು ಒಂಟಿಕೊಪ್ಪಲು ಸರ್ಕಾರಿ ಪಿಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿರುವ ಕೆಂಪಹೊನ್ನಯ್ಯ ಅವರು ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದವರು.
ಬಾಲ್ಯದಲ್ಲೇ ದೃಷ್ಟಿ ದೋಷ: ತಮ್ಮ ಊರಿನ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದಾಗ ಕಣ್ಣಿನ ರೆಟಿನಾ ಪೊರೆ ಕಳಚಿ ಕೆಂಪಹೊನ್ನಯ್ಯ ಅವರು ಸಂಪೂರ್ಣ ದೃಷ್ಟಿ ಕಳೆದುಕೊಂಡರು.ಕೆಲವು ವರ್ಷಗಳ ಕಾಲ ಭವಿಷ್ಯದ ಬಗ್ ಯೋಚಿಸಿ, ಚಿಂತಿತರಾಗಿದ್ದರು.
ನಂತರ ಮೈಸೂರಿನ ಅಂಧ ಮಕ್ಕಳ ಪಾಠಶಾಲೆಯಲ್ಲಿ ಓದು ಮುಂದುವರಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ಈಗ ಅಂಗವಿಕಲ ಕೋಟಾದಡಿಯಲ್ಲಿ ಐಎಎಸ್ ಹುದ್ದೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications