ತುಮಕೂರಿನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ತಡೆದ ಪೊಲೀಸರು
ಕಳೆದ ವಾರ ಮುಸ್ಲಿಂ ಯುವಕ ಆರ್ ಎಸ್ ಎಸ್ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದ ಎಂಬ ಕಾರಣಕ್ಕೆ ತುಮಕೂರು ನಗರದಲ್ಲಿ ಶುಕ್ರವಾರ ಆರ್ ಎಸ್ ಎಸ್ ಆಯೋಜಿಸಿದ್ದ ಕೌಮುದಿ ಪಥಸಂಚಲನಕ್ಕೆ ಕೋಮು ಗಲಭೆ ಆಗಬಹುದು ಎಂಬ ಶಂಕೆಯಿಂದ ಪೊಲೀಸರು ತಡೆಯೊಡ್ಡಿದ್ದಾರೆ
ತುಮಕೂರು, ಫೆಬ್ರವರಿ 17: ಕಳೆದ ವಾರ ಶಿರಾದ ಅಲ್ಪಸಂಖ್ಯಾತ ಯುವಕನೊಬ್ಬ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್ ಎಸ್ ಎಸ್) ಅವಾಚ್ಯವಾಗಿ ನಿಂದಿಸಿದ್ದ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೌಮುದಿ ಪಥ ಸಂಚಲನಕ್ಕೆ ಪೊಲೀಸರು ತಡೆಯೊಡ್ಡಿದ್ದಾರೆ.
ತುಮಕೂರು ನಗರದಾದ್ಯಂತ ಪಥ ಸಂಚಲನ ನಡೆಯಬೇಕಿತ್ತು. ಆದರೆ ನಡೆಸದಂತೆ ಎಸ್ ಪಿ ಇಶಾ ಪಂತ್ ತಾಕೀತು ಮಾಡಿದ್ದಾರೆ. ಸಂಜೆ 6 ಗಂಟೆಗೆ ಅರಂಭವಾಗಬೇಕಿತ್ತು. ಆದರೆ ಕೋಮುಗಲಭೆ ನಡೆಯಬಹುದು ಎಂಬ ಆತಂಕದಲ್ಲಿ ಅವಕಾಶ ನೀಡಿಲ್ಲ. ಇನ್ನು ಎಸ್ ಪಿ ಇಶಾ ಪಂತ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.[ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ ಅಧಿಕಾರ: ದೇವೇಗೌಡ]

ಕೋತಿ ತೋಪು ರಸ್ತೆಯಲ್ಲಿರುವ ಆರ್ ಎಸ್ ಎಸ್ ಕಚೇರಿಗೆ ಪೊಲೀಸ್ ಕಾವಲು ಹಾಕಲಾಗಿದೆ. ಈ ವೇಳೆ ಆರ್ ಎಸ್ ಎಸ್ ಮುಖಂಡರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಪಥ ಸಂಚಲನ ನಡೆಸಿಯೇ ನಡೆಸುತ್ತೇವೆಂದು ಪಟ್ಟು ಹಿಡಿದಿದ್ದಾರೆ ಸಂಘಟನೆ ಮುಖಂಡರು. ಆಗ ಗೇಟ್ ನಿಂದ ಹೊರಬರುತ್ತಿರುವವರನ್ನು ಪೊಲೀಸರು ಬಂಧಿಸಿದ್ದಾರೆ.[ಗುಬ್ಬಿ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಐದನೇ ಬಲಿ]
ಈ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ಶಾಸಕ ಬಿ.ಸುರೇಶ್ ಗೌಡ, ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಜರಿದ್ದರು. ಐನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀಸರು ಪಥ ಸಂಚಲನಕ್ಕೆ ತಡೆಯೊಡ್ಡಿದರು. ಆಗ ಭಾರಿ ನೂಕುನುಗ್ಗಲು ಏರ್ಪಟ್ಟಿತು.












Click it and Unblock the Notifications