ತುಮಕೂರು: ಜೆಡಿಎಸ್‌ಗೆ ಮುನ್ನಡೆ, ಪರಮೇಶ್ವರ್‌ಗೆ ಮುಖಭಂಗ

Recommended Video

      Karnataka Civic Poll Results : ತುಮಕೂರಿನಲ್ಲಿ ಜೆಡಿಎಸ್ ಮುನ್ನಡೆ | ಜಿ ಪರಮೇಶ್ವರ್ ಗೆ ಹಿನ್ನಡೆ

      ತುಮಕೂರು, ಸೆಪ್ಟೆಂಬರ್ 03: ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು. ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿದೆ.

      ತುಮಕೂರು ಮಹಾನಗರ ಪಾಲಿಕೆ ಅತಂತ್ರ ಸ್ಥಿತಿಯಾದರೆ. ಜಿಲ್ಲೆಯ ಮಧುಗಿರಿ ಕಾಂಗ್ರೆಸ್‌ ತೆಕ್ಕೆಗೆ ಬಿದ್ದಿದೆ. ಆದರೆ ಇನ್ನುಳಿದ ಕಡೆ ಜೆಡಿಎಸ್ ಪಾರುಪತ್ಯ ಸಾಧಿಸಿದೆ.

      ಮಧುಗಿರಿಯಲ್ಲಿ ಕಾಂಗ್ರೆಸ್ 13 ಸೀಟು ಜಯಿಸಿದ್ದರೆ. ಜೆಡಿಎಸ್‌ 9 ಹಾಗೂ ಇತರೆ 1 ಸೀಟುಗಳಲ್ಲಿ ವಿಜಯ ಸಾಧಿಸಿದ್ದಾರೆ. ಬಿಜೆಪಿ ಇಲ್ಲಿ ಖಾತೆಯನ್ನೇ ತೆರೆದಿಲ್ಲ.

      Tumkur local body election jds in the lead

      ಚಿಕ್ಕನಾಯಕನಹಳ್ಳಿ ಪುರಸಭೆಯಲ್ಲಿ ಜೆಡಿಎಸ್ 14 ಸೀಟು ಜಯಿಸಿ ಪುರಸಭೆಯನ್ನು ತನ್ನ ವಶಕ್ಕೆ ಪಡೆದಿದೆ. ಇಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಆಶ್ಚರ್ಯ ಮೂಡಿಸಿದೆ. ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಕೇವಲ 2 ಸೀಟು ಜಯಿಸಿದ್ದರೆ. ಬಿಜೆಪಿ 5 ಗೆದ್ದಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ.

      ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆಯಲ್ಲಿ ಜೆಡಿಎಸ್ ಪಕ್ಷ ಪಾರಮ್ಯ ಮೆರೆದಿದೆ. ಪರಮೇಶ್ವರ್ ಅವರಿಗೆ ಇದು ಭಾರಿ ಹಿನ್ನೆಡೆ ಎಂದೇ ವಿಶ್ಲೇಷಿಸಲಾಗಿದೆ. ಗುಬ್ಬಿ ಪುರಸಭೆಯಲ್ಲಿಯೂ ಸಹ ಜೆಡಿಎಸ್ ಪಾರಮ್ಯ ಮೆರೆದಿದೆ.

      ತುಮಕೂರು ಪಟ್ಟಣ ಪಂಚಾಯಿತಿ ಅತಂತ್ರವಾಗಿದ್ದು. ಇಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿ ಅಧಿಕಾರ ಹಿಡಿಯುವುದು ಖಾಯಂ ಆಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+