• search
  • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತುಮಕೂರು-ಚಿತ್ರದುರ್ಗ ಷಟ್ಪಥಕ್ಕೆ ರಾಹುಲ್ ಚಾಲನೆ

By Mahesh
|

ತುಮಕೂರು, ಫೆ.17: ತುಮಕೂರು- ಚಿತ್ರದುರ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 48ರ 114 ಕಿ.ಮಿ.ರಸ್ತೆಯನ್ನು ಆರು ಪಥದ ರಸ್ತೆಗೆ ವಿಸ್ತರಣೆ ಮಾಡಿರುವ ರಸ್ತೆಯನ್ನು ಎಐಸಿಸಿ ಉಪಾಧ್ಯಕ್ಷ ಹಾಗೂ ಸಂಸದ ರಾಹುಲ್ ‌ಗಾಂಧಿ ಲೋಕಾರ್ಪಣೆ ಗೊಳಿಸಿದ್ದಾರೆ. ಈ ಮೂಲಕ ಬಹು ಕಾಲದ ಬೇಡಿಕೆ ಈಡೇರಿಸಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

ತುಮಕೂರಿನ ಊರುಕೆರೆ ಬಳಿಯ ಜೈನ್ ಪಬ್ಲಿಕ್ ಸ್ಕೂಲ್ ಬಳಿ ರಸ್ತೆಗೆ ಅಳವಡಿಸಿದ್ದ ಟೇಪ್ ಕತ್ತರಿಸಿ ರಸ್ತೆಯನ್ನು ರಾಹುಲ್ ‌ಗಾಂಧಿ ಉದ್ಘಾಟಿಸಿ ನಂತರ ಫಲಕ ಆನಾವರಣಗೊಳಿಸಿದರು.

2004ರಲ್ಲಿ ನಾಲ್ಕು ಪಥದ ರಸ್ತೆಯಾಗಿ ನಿರ್ಮಾಣಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಇತ್ತೀಚಿನ ವಾಹನ ದಟ್ಟಣೆ ಮತ್ತಿತರರ ಕಾರಣಗಳಿಂದ ವಾಹನ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾದ ಪರಿಣಾಮ ಆರು ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಹುಲ್ ಹೇಳಿದರು.[ಭಾರತದ ಹೆದ್ದಾರಿಗಳು ಹಾಗೂ ವಾಜಪೇಯಿ ಕನಸು]

114.45 ಕಿ.ಮಿ.ರಸ್ತೆಯಲ್ಲಿ ಪ್ರಮುಖವಾಗಿ ಮೂರು ಸೇತುವೆಗಳು, 21 ಕಿರುಸೇತುವೆ,ಆರು ಮೇಲ್ಸೇತುವೆ, 105 ಕಲ್ವರ್ಟ್‌ಗಳು, 5 ಜಾನುವಾರುಗಳ ಕೆಳರಸ್ತೆ, 2 ಟೋಲ್ ಪ್ಲಾಜಾ, 15 ಪಾದಚಾರಿ ಕೆಳ ಸೇತುವೆ, 38 ಬಸ್ ಬೇಸ್, 33 ಪ್ರವೇಶ ಮತ್ತು ನಿರ್ಗಮನ ರಸ್ತೆ, 13 ಪಾದಚಾರಿ ಸುರಂಗ ಮಾರ್ಗಗಳನ್ನು ಒಳಗೊಂಡಿದೆ. 1,142 ಕೋಟಿ ರೂ.ಗಳಲ್ಲಿ ಕಾಮಗಾರಿ ನಿರ್ಮಾಣಗೊಂಡಿದೆ. ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಡಿಯಲ್ಲಿ ಎನ್.ಎಚ್.ಡಿ.ಪಿ. 5 ಕಾಮಗಾರಿ ನಿರ್ವಹಿಸುತ್ತಿದ್ದು, ರಸ್ತೆ ಕಾಮಗಾರಿ ಪೂರ್ಣಗೊಂಡಿದೆ.

ಕಾರ್ಯಕ್ರಮದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ‌ಫೆರ್ನಾಂಡಿಸ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ರೈಲ್ವೆ ಸಚಿವ ಕೆ.ಎಚ್.ಮುನಿಯಪ್ಪ, ಸಚಿವರಾದ ಮಹದೇವಪ್ಪ, ಆಂಜನೇಯ, ಟಿ.ಬಿ.ಜಯಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಎನ್ ಡಿಎ ಅಧಿಕಾರದಲ್ಲಿದ್ದ ಕಾಲದಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸುವರ್ಣ ಚತುಷ್ಪಥ ಯೋಜನೆಯಡಿಯಲ್ಲಿ ತುಮಕೂರು-ಚಿತ್ರದುರ್ಗ ನಡುವೆ ನಾಲ್ಕು ರಸ್ತೆಗಳ ಹೆದ್ದಾರಿ ನಿರ್ಮಾಣವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ರಸ್ತೆ ಮೇಲ್ದರ್ಜೆಗೇರಿಸಲು ಕ್ರಮ : ರಾಹುಲ್

ರಸ್ತೆ ಮೇಲ್ದರ್ಜೆಗೇರಿಸಲು ಕ್ರಮ : ರಾಹುಲ್

2004ರಲ್ಲಿ ನಾಲ್ಕು ಪಥದ ರಸ್ತೆಯಾಗಿ ನಿರ್ಮಾಣಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ನಾಲ್ಕು ಇತ್ತೀಚಿನ ವಾಹನ ದಟ್ಟಣೆ ಮತ್ತಿತರರ ಕಾರಣಗಳಿಂದ ವಾಹನ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾದ ಪರಿಣಾಮ ಆರು ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಹುಲ್ ಹೇಳಿದರು

ತುಮಕೂರು-ಚಿತ್ರದುರ್ಗ ಷಟ್ಪಥ ಫಲಕ ಆನಾವರಣ

ತುಮಕೂರು-ಚಿತ್ರದುರ್ಗ ಷಟ್ಪಥ ಫಲಕ ಆನಾವರಣ

ತುಮಕೂರಿನ ಊರುಕೆರೆ ಬಳಿಯ ಜೈನ್ ಪಬ್ಲಿಕ್ ಸ್ಕೂಲ್ ಬಳಿ ರಸ್ತೆಗೆ ಅಳವಡಿಸಿದ್ದ ಟೇಪ್ ಕತ್ತರಿಸಿ ರಸ್ತೆಯನ್ನು ರಾಹುಲ್ ‌ಗಾಂಧಿ ಉದ್ಘಾಟಿಸಿ, ನಂತರ ಫಲಕ ಆನಾವರಣಗೊಳಿಸಿದರು.

ತುಮಕೂರು ಭಾರತ್ ನಿರ್ಮಾಣ್ ಸಮಾವೇಶ

ತುಮಕೂರು ಭಾರತ್ ನಿರ್ಮಾಣ್ ಸಮಾವೇಶ

ತುಮಕೂರು ಭಾರತ್ ನಿರ್ಮಾಣ್ ಸಮಾವೇಶದಲ್ಲಿ ರಾಹುಲ್ ‌ಗಾಂಧಿ ಹಾಗೂ ಸಿದ್ದರಾಮಯ್ಯ

ರಾಹುಲ್ ‌ಗಾಂಧಿಗೆ ಹೊಸ ಪೇಟ

ರಾಹುಲ್ ‌ಗಾಂಧಿಗೆ ಹೊಸ ಪೇಟ

ತುಮಕೂರು ಭಾರತ್ ನಿರ್ಮಾಣ್ ಸಮಾವೇಶದಲ್ಲಿ ರಾಹುಲ್ ಅವರು ತಮಗೆ ಕೆಪಿಸಿಸಿ ನೀಡಿದ ಪೇಟ ನೋಡುತ್ತಿದ್ದಾರೆ.

ಮಂಜುಳಾ ನಾಯ್ಡು ಅವರಿಂದ ರಾಹುಲ್ ಗೆ ಪೇಟ

ಮಂಜುಳಾ ನಾಯ್ಡು ಅವರಿಂದ ರಾಹುಲ್ ಗೆ ಪೇಟ

ತುಮಕೂರಿನ ಮಹಿಳಾ ಸಮಾವೇಶದಲ್ಲಿ ಮಂಜುಳಾ ನಾಯ್ಡು ಅವರಿಂದ ರಾಹುಲ್ ಗೆ ಪೇಟ ತೊಡಿಸಿ ಸನ್ಮಾನ

ರೋಡ್ ಶೋ ಮುಗಿಸಿ ಬಂದ ರಾಹುಲ್

ರೋಡ್ ಶೋ ಮುಗಿಸಿ ಬಂದ ರಾಹುಲ್

ರೋಡ್ ಶೋ ಮುಗಿಸಿ ಬಂದ ರಾಹುಲ್ ಗಾಂಧಿಗೆ ಸಾರ್ವಜನಿಕರಿಂದ ಹಾರ

ರಾಹುಲ್ ಗಾಂಧಿ ರೋಡ್ ಶೋ ಚಿತ್ರ

ರಾಹುಲ್ ಗಾಂಧಿ ರೋಡ್ ಶೋ ಚಿತ್ರ

ಮೈಸೂರಿನಿಂದ ತುಮಕೂರು ರೋಡ್ ಶೋ ಯಶಸ್ವಿಯಾಗಿ ಮುಗಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.

English summary
All India Congress Committee vice-president Rahul Gandhi and Minister for Road Transport and Highways Oscar Fernandes inaugurated a six-lane stretch of NH-48 between Tumkur and Chitradurga districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X