ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನರ್ಮ್ ಯೋಜನೆಯಡಿ ತುಮಕೂರಿಗೆ 40 ಬಸ್

|
Google Oneindia Kannada News

ತುಮಕೂರು, ಜುಲೈ 09 : ನರ್ಮ್ ಯೋಜನೆಯಡಿ ತುಮಕೂರು ನಗರಕ್ಕೆ 40 ನೂತನ ಕೆಎಸ್ಆರ್‌ಟಿಸಿ ಬಸ್‌ಗಳು ಸಿಕ್ಕಿವೆ. 14 ಹೊಸ ಮಾರ್ಗಗಳಲ್ಲಿ ಬಸ್ ಸಂಚಾರ ಆರಂಭಿಸಲು ಅನುಮತಿ ನೀಡುವಂತೆ ಸಂಸ್ಥೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ತುಮಕೂರು ಕೇಂದ್ರ ವಿಭಾಗಕ್ಕೆ 40 ನೂತನ ಬಸ್ಸುಗಳು ಸಿಕ್ಕಿವೆ ಎಂದು ಕೆಎಸ್ಆರ್‌ಟಿಸಿ ಉಪ ವಿಭಾಗದ ನಿಯಂತ್ರಣಾಧಿಕಾರಿ ಎಸ್.ಬಸವರಾಜ್ ಅವರು ಹೇಳಿದ್ದಾರೆ. ನಗರದಲ್ಲಿ ಸದ್ಯ 50 ನಗರ ಸಾರಿಗೆ ಬಸ್ಸುಗಳಿದ್ದು, ಇವುಗಳ ಸಂಖ್ಯೆಯನ್ನು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗಿದೆ. [ಬಿಎಂಟಿಸಿಗೆ 2000 ಬಸ್ ನೀಡಿದ ಕೇಂದ್ರ ಸರ್ಕಾರ]

bus

ಹೊಸದಾಗಿ ದೊರೆಯುವ ಬಸ್‌ಗಳ ಮೂಲಕ ತುಮಕೂರು ನಗರದಿಂದ ತಾಲೂಕು ಕೇಂದ್ರಗಳಿಗೆ ಬಸ್ ಸಂಚಾರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ತುಮಕೂರು-ಶಿರಾ, ತುಮಕೂರು-ಮಧುಗಿರಿ, ತುಮಕೂರು-ಕೊರಟಗೆರೆ, ತುಮಕೂರು-ಗುಬ್ಬಿ ಮುಂತಾದ ಸ್ಥಳಗಳಿಗೆ ಬಸ್ ಸೌಲಭ್ಯ ಒದಗಿಸಲಾಗುತ್ತದೆ. [ನರ್ಮ್ ಯೋಜನೆಯಡಿ ಮೈಸೂರಿಗೆ ಕಬಿನಿ ನೀರು]

ನಗರ ಸಾರಿಗೆ ಸೇವೆಯಲ್ಲಿ ಸದ್ಯ 50 ಬಸ್ಸುಗಳನ್ನು ಓಡಿಸಲಾಗುತ್ತಿದೆ. ಸುಮಾರು 30 ಬಸ್‌ಗಳನ್ನು ಹೋಬಳಿ ಹಾಗೂ ಹಳ್ಳಿಗಳ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ಹೊಸದಾಗಿ ಬರುವ 40 ಬಸ್ಸುಗಳನ್ನು ನಗರ ಸಾರಿಗೆ ಮತ್ತು 14 ಹೊಸ ಮಾರ್ಗದಲ್ಲಿ ಓಡಿಸಲು ನಿರ್ಧರಿಸಲಾಗಿದೆ.

ಜಿಲ್ಲಾಡಳಿತ 14 ನೂತನ ಮಾರ್ಗಗಳ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸರ್ಕಾರ ಒಪ್ಪಿಗೆ ನೀಡಿದರೆ, ನೂತನ ಬಸ್ ಸೇವೆಗಳು ಆರಂಭವಾಗಲಿವೆ.

English summary
Tumakuru city will get 40 new buses under Jawaharlal Nehru National Urban Renewal Mission (JnNURM).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X