ಗುಬ್ಬಿಯಲ್ಲಿ ಸಿಡಿಲಿಗೆ ಇಬ್ಬರು ಬಲಿ, ಮತ್ತಿಬ್ಬರಿಗೆ ಗಾಯ

ಗುಬ್ಬಿ, ಮಾರ್ಚ್. 06 : ಸೋಮವಾರ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕು ಕಸಬ ಹೋಬಳಿಯ ಮಲ್ಲಪ್ಪನಹಳ್ಳಿ ಗ್ರಾಮದ 4 ಜನರಿಗೆ ಸಿಡಿಲು ಬಡಿದ ಪರಿಣಾಮ ಇಬ್ಬರ ಸಾವನ್ನಪ್ಪಿದ್ದು ಮತ್ತಿಬ್ಬರಿಗೆ ಗಂಭೀರ ಗಾಯಗಳಾಗಿವೆ.

ಮಂಜುಳ(40) ಮತ್ತು ಭಾರತಿ(13) ಮೃತ ದುರ್ದೈವಿಗಳಾಗಿದ್ದು ಗಾಯಾಗೊಂಡಿರುವ ಶಿಲ್ಪಾ(16), ಸಂತೋಷ್(13) ಎನ್ನುವರ ಸ್ಥಿತಿ ಗಂಭೀರವಾಗಿದೆ.

Two dies as thunderbolt hit four in Gubbi taluk, Tumkur district

ಮಲ್ಲಪ್ಪನಹಳ್ಳಿ ವಾಸಿಗಳಾದ ಇವರು ಕೂಲಿ ಕೆಲಸಕ್ಕೆಂದು ಹೋಗಿ ಸಂಜೆ ವಾಪಸ್ಸು ಮನೆಗೆ ಬರುವ ವೇಳೆ ಮಳೆ ಬಂದಿದ್ದರಿಂದ ಪೆಮ್ಮನಹಳ್ಳಿ ಗೇಟ್ ಬಳಿಯ ಆಲದ ಮರದ ಆಶ್ರಯ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಸಿಡಿಲು ಬಡಿದು ಮಂಜುಳ ಮತ್ತು ಭಾರತಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಶಿಲ್ಪ ಮತ್ತು ಸಂತೋಷ್ ಅವರನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+