Get Updates
Get notified of breaking news, exclusive insights, and must-see stories!

ಪರಮೇಶ್ವರ್ ಒಡೆತನದ ಸಿದ್ಧಾರ್ಥ ಕಾಲೇಜಿನಲ್ಲಿ ದೇವರ ಹುಂಡಿ ಹಣ!

ತುಮಕೂರು, ಅಕ್ಟೋಬರ್ 11: ಮಾಜಿ ಸಿಎಂ ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಕಾಲೇಜಿನಲ್ಲಿ ದೇವಾಲಯದ ಹುಂಡಿಯ ದುಡ್ಡು ಪತ್ತೆಯಾಗಿದೆ.

ನಿನ್ನೆ ಪರಮೇಶ್ವರ್ ಅವರ ನಿವಾಸ ಹಾಗೂ ಅವರ ಒಡೆತನದ ಸಿದ್ಧಾರ್ಥ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಮಂಡ್ಯ ಜಿಲ್ಲೆ ಮದ್ದೂರಿನ ದೇವಾಲಯವೊಂದರ ಹುಂಡಿಯ ಹಣ ಕಾಲೇಜಿನಲ್ಲಿ ಇಟ್ಟುಕೊಂಡಿರುವುದು ಪತ್ತೆಯಾಗಿದೆ.

ಮದ್ದೂರು ತಾಲ್ಲೂಕಿನ ಮುಳ್ಕಟ್ಟಮ್ಮ ದೇವಾಲಯದ ಹುಂಡಿಯ ನಲವತ್ತು ಲಕ್ಷ ಹಣ ಸಿದ್ಧಾರ್ಥ ಕಾಲೇಜಿನಲ್ಲಿ ಇಟ್ಟುಕೊಳ್ಳಲಾಗಿತ್ತು. ಎರಡು ತಿಂಗಳ ಹಿಂದೆ ದೇವಾಲಯದ ಹುಂಡಿ ಒಡೆಯಲಾಗಿ ಅದರಲ್ಲಿ ನಲವತ್ತು ಲಕ್ಷ ಹಣ ಸಿಕ್ಕಿತ್ತು ಆ ಹಣವನ್ನು ಸಿದ್ಧಾರ್ಥ ಕಾಲೇಜಿನಲ್ಲಿ ಇಡಲಾಗಿತ್ತು.

Temple Money Found In G Parameshwars Siddartha College

ಮುಳ್ಕಟ್ಟಮ್ಮ ದೇವಾಲಯ ಪರಮೇಶ್ವರ್ ಅವರ ಮನೆ ದೇವರಾಗಿದ್ದು, ಪರಮೇಶ್ವರ್ ಅವರು ಆ ದೇವಾಲಯದ ಟ್ರಸ್ಟಿ ಸಹ ಆಗಿದ್ದಾರೆ. ಹಾಗಾಗಿ ಆ ದೇವಾಲಯದ ಹುಂಡಿಯ ಹಣವನ್ನು ತಾವು ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಪರಮೇಶ್ವರ್ ಅವರು ಟ್ರಸ್ಟಿ ಆಗಿದ್ದರು, ದೇವಾಲಯಕ್ಕೆ ಅವಶ್ಯವಿದ್ದ ಕಾಮಗಾರಿಯೊಂದನ್ನು ಮಾಡಿಕೊಡಲು ಪರಮೇಶ್ವರ್ ಅವರಿಗೆ ಮನವಿ ಮಾಡಲಾಗಿತ್ತು ಹಾಗಾಗಿ ಹುಂಡಿ ಹಣವನ್ನು ಅವರಿಗೇ ನೀಡಲಾಗಿತ್ತು, ಅದಕ್ಕೆ ಇನ್ನಷ್ಟು ಹಣ ಸೇರಿಸಿ ಕಾಮಗಾರಿ ನಡೆಸಿಕೊಡುವಂತೆ ವಿನಂತಿಸಲಾಗಿತ್ತು ಎಂದು ಮೂಲಗಳು ಹೇಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+