• search
 • Live TV
ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊದಲು ಕಾಲೇಜು, ಪ್ರೌಢಶಾಲೆ, ಕೊನೆಗೆ ಪ್ರಾಥಮಿಕ ಶಾಲೆ ಓಪನ್

|
Google Oneindia Kannada News

ತುಮಕೂರು, ಜುಲೈ 2: ಕೊರೊನಾ ನಡುವೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದೆ. ಆದರೆ, ಆ ನಂತರ ಶಾಲಾ, ಕಾಲೇಜುಗಳು ಯಾವಾಗ ತೆರೆಯಲಾಗುತ್ತದೆ ಎನ್ನುವ ಬಗ್ಗೆ ಎಲ್ಲರಿಗೆ ಪ್ರಶ್ನೆ ಮೂಡಿದೆ.

   Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

   ಇಂದು ಈ ಬಗ್ಗೆ ತುಮಕೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿದ್ದಾರೆ. ಮೊದಲು ಕಾಲೇಜು ಹಾಗೂ ಪ್ರೌಢಶಾಲೆ ಆ ನಂತರ ಅಂದರೆ, ಕೊನೆಗೆ ಪ್ರಾಥಮಿಕ ಶಾಲೆ ಓಪನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಶಾಲೆ ತೆರೆಯುವ ದಿನಾಂಕದ ಸದ್ಯಕ್ಕೆ ನಿರ್ಧಾರವಾಗಿಲ್ಲ.

   ಎಸ್ಎಸ್ಎಲ್‌ಸಿ, ಪಿಯುಸಿ ಫಲಿತಾಂಶ ದಿನಾಂಕ ಹೇಳಿದ ಶಿಕ್ಷಣ ಸಚಿವಎಸ್ಎಸ್ಎಲ್‌ಸಿ, ಪಿಯುಸಿ ಫಲಿತಾಂಶ ದಿನಾಂಕ ಹೇಳಿದ ಶಿಕ್ಷಣ ಸಚಿವ

   ಸದ್ಯ ರಾಜ್ಯದಲ್ಲಿ ಕೊರೊನಾ ವೈರಸ್‌ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಶಾಲೆ ಹಾಗೂ ಕಾಲೇಜು ತೆರೆಯುವುದು ತುಂಬ ದೂರದ ಮಾತಾಗಿದೆ. ಕೊರೊನಾ ಒಂದು ಮಟ್ಟಕ್ಕೆ ನಿಯಂತ್ರಣಕ್ಕೆ ಬಂದ ಮೇಲೆ ಮೊದಲು ಕಾಲೇಜು ಹಾಗೂ ಪ್ರೌಢ ಶಾಲೆಗಳನ್ನು ತೆರೆಯಲು ಆದ್ಯತೆ ನೀಡಲಾಗುತ್ತದೆ.

   ಕೊರೊನಾ ಸಣ್ಣ ಮಕ್ಕಳಿಗೆ ಬೇಗ ಹರಡುವ ಕಾರಣ ಪ್ರಾಥಮಿಕ ಶಾಲೆಗಳನ್ನು ಕಾಲೇಜು ಹಾಗೂ ಪ್ರೌಢ ಶಾಲೆಗಳ ನಂತರ ಕೊನೆಗೆ ತೆರೆಯಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಆಗಸ್ಟ್ ತಿಂಗಳ ನಂತರವಷ್ಟೇ ಶಾಲೆ ತೆರೆಯುವ ಬಗ್ಗೆ ಇನ್ನೊಂದು ಸುತ್ತಿನ ಚರ್ಚೆ ಆರಂಭಿಸುವುದಾಗಿ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

   ಇಂದು ತುಮಕೂರಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಸಮಯದಲ್ಲಿ ಈ ಬಗ್ಗೆ ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.

   English summary
   Education Minister Suresh Kumar Spoke About School Opening In Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X