ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ
ತುಮಕೂರು, ಜನವರಿ 19: ಎರಡು ದಿನಗಳ ಹಿಂದೆ ಬಹು ನಿತ್ರಾಣಗೊಂಡಿದ್ದ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕಳೆದೆರಡು ದಿನಗಳಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿದೆ. ಇಂದು ಬೆಳಿಗ್ಗೆ ಕಿರಿಯ ಸ್ವಾಮೀಜಿಗಳ ಜೊತೆಗೆ ಶ್ರೀಗಳು ಇಷ್ಟಲಿಂಗ ಪೂಜೆ ಮಾಡಿದ್ದಾರೆ.
ಶ್ರೀಗಳಲ್ಲಿ ಸೋಂಕಿನ ಅಂಶ ಕಡಿಮೆ ಆಗಿದ್ದು, ಇನ್ನೆರಡು ದಿನಗಳಲ್ಲಿ ಪೌಷ್ಟಿಕಾಂಶ ಮರಳಿ ಮರಳಲಿದೆ ಎಂದು ವೈದ್ಯರು ಆಶಾಭಾವ ವ್ಯಕ್ತಪಡಿಸಿದ್ದಾರೆ.
ವೆಂಟಿಲೇಟರ್‌ನ ಸಹಾಯವಿಲ್ಲದೆ ಶ್ರೀಗಳು ಉಸಿರಾಡುತ್ತಿದ್ದಾರೆ. ಉಸಿರಾಟ ಕಷ್ಟವಾದಾಗ ಮಾತ್ರವೇ ವೆಂಟಿಲೇಟರ್ ತೊಡಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಶ್ರೀಗಳ ದೇಹದಲ್ಲಿ ಪೌಷ್ಠಿಕಾಂಶ ಹೆಚ್ಚಲು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಶ್ರೀಗಳು ಇನ್ನಷ್ಟು ಚೇತರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಶ್ರೀಗಳು ಬಹುವಾಗಿ ಕೃಷರಾಗಿದ್ದರು ಆದರೆ ಹಠಾತ್ತನೆ ಎರಡು ದಿನಗಳ ಈಚೆಗೆ ಅತ್ಯುತ್ತಮ ಚೇತರಿಕೆ ಕಂಡು ಬರುತ್ತಿದೆ.












Click it and Unblock the Notifications