ಶ್ರೀಗಳು ಅಸ್ತಂಗತ: ಹರಿದುಬರುತ್ತಿರುವ ಭಕ್ತಸಾಗರ, ಬಿಗಿ ಭದ್ರತೆ
ತುಮಕೂರು, ಜನವರಿ 21: ತ್ರಿವದ ದಾಸೋಹಿ ಶಿವಕುಮಾರಸ್ವಾಮೀಜಿ ಅವರು ಅಸ್ತಂಗತರಾಗಿದ್ದಾರೆ. ಭಕ್ತಾದಿಗಳು ಲಕ್ಷೋಪಾದಿ ಸಂಖ್ಯೆಯಲ್ಲಿ ಮಠದ ಕಡೆ ಧಾವಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ತುಮಕೂರಿನಲ್ಲಿ ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
20,000 ಕ್ಕೂ ಹೆಚ್ಚು ಪೊಲೀಸರು ತುಮೂರಿನಾದ್ಯಂತ ಇದ್ದಾರೆ. ಸಿದ್ದಗಂಗಾ ಮಠದ ಬಳಿಯೇ 10,000 ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರೀಗಳ ದರ್ಶನಕ್ಕೆ ಆಗಮಿಸುವ ಗಣ್ಯರ ಅನುಕೂಲಕ್ಕೆ ಮಠಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಮಾರ್ಗಗಳನ್ನು ಬದಲು ಮಾಡಲಾಗಿದೆ.

ತುಮಕೂರಿನಲ್ಲಿ ಹೈಅಲರ್ಟ್ ಘೋಷಿಸಿದ್ದು, ನೆರೆಯ ಕೆಲವು ಜಿಲ್ಲೆಗಳಿಂದಲೂ ಪೊಲೀಸ್ ಸಿಬ್ಬಂದಿಯನ್ನು ಈಗಾಗಲೇ ಕರೆಸಿಕೊಳ್ಳಲಾಗಿದೆ. ಸಿದ್ದಗಂಗಾ ಮುಖ್ಯ ಮಠದಿಂದ ಒಂದು ಕಿ.ಮೀ ದೂರದ ವರೆಗೆ ಖಾಸಗಿ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಮಠದ ಮುಖ್ಯದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದು, ಶ್ರೀಗಳ ದೇಹವನ್ನು ಅಂತಿಮ ದರ್ಶನಕ್ಕೆ ಇಡಲು ಸಕಲ ಸಿದ್ದತೆ ನಡೆಸಲಾಗಿದೆ.












Click it and Unblock the Notifications