ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದರೆ ಸಿದ್ದಗಂಗಾ ಶ್ರೀ?
Recommended Video

Siddaganga Swamiji : ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆ ಕರ್ನಾಟಕದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆರೋಗ್ಯ ಸ್ಥಿತಿ ತೀವ್ರವಾಗಿದೆ ಎಂಬ ಸುದ್ದಿ ಹರಿದಾಡುತ್ತಿರುವ ವೇಳೆಯಲ್ಲೇ ತುಮಕೂರು ಜಿಲ್ಲೆಯಲ್ಲಿ ಸೋಮವಾರ ಹಾಗೂ ಮಂಗಳವಾರ (ಜನವರಿ 21, 22) ರಜಾ ಘೋಷಿಸಲಾಗಿದೆ. ಈ ಮಧ್ಯೆ ಮಠದ ವಿದ್ಯಾ ಸಂಸ್ಥೆಯದು ಎನ್ನಲಾದ ಸುತ್ತೋಲೆಯಂದು ಹರಿದಾಡುತ್ತಿದ್ದು, ಅದೀಗ ಚರ್ಚೆಯ ವಿಷಯವಾಗಿದೆ.
ಆ ಸುತ್ತೋಲೆಯ ಪ್ರಕಾರ ಜನವರಿ 21ರ ಸೋಮವಾರ ಬೆಳಗ್ಗೆ 11.44ಕ್ಕೆ ಶಿವ ಸಾಯುಜ್ಯ ಹೊಂದಿದ್ದಾರೆ. ಅವರ ಕ್ರಿಯಾ ಸಮಾಧಿ ಕಾರ್ಯಗಳು/ ಅಂತ್ಯ ಸಂಸ್ಕಾರವನ್ನು ಜನವರಿ 22ರಂದು ಸಂಜೆ 4.30ಕ್ಕೆ ನಡೆಸಲಾಗುವುದು ಎಂದು ತಿಳಿಸಲಾಗಿದೆ.

ರಜಾ ನಂತರ ತಮ್ಮ ತಮ್ಮ ಶಾಲೆ-ಕಾಲೇಜುಗಳಲ್ಲಿ ಶ್ರೀಗಳ ಭಾವಚಿತ್ರವನ್ನು ಇಟ್ಟು, ಗೌರವ ಸಲ್ಲಿಸಬೇಕು ಎಂದು ಹೇಳಲಾಗಿದೆ. ಆದರೆ ಶಿವಕುಮಾರ ಸ್ವಾಮೀಜಿ ಇಹ ಲೋಕ ತೊರೆದ ಸುದ್ದಿ ಮಧ್ಯಾಹ್ನ 1.57ರ ಹೊತ್ತಿಗೆ ಬಂದಿದೆ. ಅಂದಹಾಗೆ ಶಾಲೆ-ಕಾಲೇಜು ರಜಾ ಘೋಷಣೆಯ ಸುತ್ತೋಲೆಗೆ ಮಠದ ಕಾರ್ಯದರ್ಶಿಗಳಾದ ಟಿ.ಕೆ.ನಂಜುಂಡಪ್ಪ ಅವರ ಸಹಿ ಇದೆ.












Click it and Unblock the Notifications