ಆಡಳಿತಾರೂಢ ಬಿಜೆಪಿ '100% ಕಮಿಷನ್' ಸರ್ಕಾರ: ಖರ್ಗೆ
ಬಿಜೆಪಿ ಮುಖಂಡರು, ಸಚಿವರು ಕಾಮಗಾರಿಯ ಅಂದಾಜು ವೆಚ್ಚವನ್ನು ಶೇ. 200ರಷ್ಟು ಹೆಚ್ಚಿಸಿ, ಸಚಿವರು ಶೇ. 40 ಕಮಿಷನ್ ಇಟ್ಟುಕೊಂಡು ಉಳಿದ ಶೇ.60ರಷ್ಟು ಹಣವನ್ನು ಪಕ್ಷಕ್ಕೆ ನೀಡುತ್ತಿದ್ದಾರೆ.
ತುಮಕೂರು, ಮಾರ್ಚ್ 6: ರಾಜ್ಯದಲ್ಲಿ ಬಿಜೆಪಿ ನಾಯಕರು ಶೇ.100 ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ಪಕ್ಷದ ನಾಯಕರು 100 ಪರ್ಸೆಂಟ್ ಭ್ರಷ್ಟರು ಎಂದು ಬಿಜೆಪಿ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರೋಪಿಸಿದರು.
ಕೊರಟಗೆರೆಯಲ್ಲಿ ಪಕ್ಷದ ಕಚೇರಿ ರಾಜೀವ್ ಭವನ ಉದ್ಘಾಟಿಸಿ ಮಾತನಾಡಿದ ಖರ್ಗೆ, ಬಿಜೆಪಿ ಮುಖಂಡರು, ಸಚಿವರು ಕಾಮಗಾರಿಯ ಅಂದಾಜು ವೆಚ್ಚವನ್ನು ಶೇ. 200ರಷ್ಟು ಹೆಚ್ಚಿಸಿ, ಸಚಿವರು ಶೇ. 40 ಕಮಿಷನ್ ಇಟ್ಟುಕೊಂಡು ಉಳಿದ ಶೇ.60ರಷ್ಟು ಹಣವನ್ನು ಪಕ್ಷಕ್ಕೆ ನೀಡುತ್ತಿದ್ದಾರೆ. ಮೋದಿ ಮತ್ತು ಅಮಿತ್ ಶಾ ಅವರ ಮೂಗಿನ ನೇರಕ್ಕೆ ಸಾರ್ವಜನಿಕ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಡಿ ಮತ್ತು ಐಟಿ ಏಜೆನ್ಸಿಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಗುರಿ ಮಾಡಿ ದಾಳಿ ಮಾಡಿಸುಸುತ್ತಿದ್ದಾರೆ. ಭ್ರಷ್ಟ ಬಿಜೆಪಿ ನಾಯಕರ ಮೇಲೆ ಇಡಿ/ಐಟಿ ದಾಳಿ ಏಕೆ ಆಗುತ್ತಿಲ್ಲ? ಇದರ ಬಗ್ಗೆ ಮೋದಿ ಮತ್ತು ಷಾ ಮಾತನಾಡಬೇಕು. ಅವರು ಕಾಂಗ್ರೆಸ್ ಅನ್ನು ಭ್ರಷ್ಟರು ಎಂದು ಕರೆಯುತ್ತಾರೆ. ಆದರೆ ಅವರ ಪಕ್ಷದವರೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಲು ದೇಶದ ವಿವಿಧ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಮೇ ವೇಳೆಗೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಸಮೇತ ಕಿತ್ತೊಗೆದು ಎಲ್ಲಾ ವರ್ಗದ ಜನರಿಗಾಗಿ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವನ್ನು ಸ್ಥಾಪಿಸಬೇಕು ಎಂದು ಅವರು ಜನರನ್ನು ಒತ್ತಾಯಿಸಿದರು.

"ಮೋದಿ ಪ್ರಧಾನಿಯಾಗಿ ಆರಾಮವಾಗಿ ಕುಳಿತಿದ್ದಾರೆ. ಇನ್ನು ಕೆಲವು ದಿನ ಅಲ್ಲೇ ಕುಳಿತುಕೊಳ್ಳಲಿ. ಮುಂದಿನ ದಿನಗಳಲ್ಲಿ ಏನಾಗುತ್ತೋ ನೋಡೋಣ. ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ವಿವಿಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ಮೋದಿ ಅವರು ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಎಂದು ಹೇಳಲಿ? ನಿರುದ್ಯೋಗ ಮತ್ತು ಬೆಲೆ ಏರಿಕೆ ಮತ್ತಿತರ ಸಮಸ್ಯೆಗಳ ಬಗ್ಗೆ ಅವರು ಕೈಗೊಂಡ ನಿರ್ಧಾರಗಳೇನು ಎಂದು ಅವರು ಪ್ರಶ್ನಿಸಿದರು.












Click it and Unblock the Notifications