ಬಿಜೆಪಿ ಕಾರ್ಯಕರ್ತೆ ಶಕುಂತಲಾ ವಿರುದ್ಧ ರೌಡಿ ಶೀಟ್; ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದ ಕಾರ್ಯಕರ್ತರು

ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಎನ್ನುವವರ ಸೋಷಿಯಲ್ ಮೀಡಿಯಾ ಪೋಸ್ಟ್ ಆಧರಿಸಿ ಜಯನಗರ ಪೊಲೀಸ್ ಠಾಣೆ ಪೊಲೀಸರು ರೌಡಿ ಶೀಟ್ ತೆಗೆಯಲು ಮುಂದಾಗಿದ್ದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ ಆಧರಿಸಿ ಈಗಾಗಲೇ ಶಕುಂತಲಾ ವಿರುದ್ಧ ದೂರು ದಾಖಲಾಗಿತ್ತು, ಉತ್ತರ ಪ್ರದೇಶ ಗಲಭೆ ವಿಚಾರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಕ್ಕೆ ಶಕುಂತಲಾಗೆ ನೋಟಿಸ್ ನೀಡಿರುವ ಪೊಲೀಸರು, ನಿಮ್ಮ ಮೇಲೆ ರೌಡಿ ಶೀಟರ್ ಯಾಕೆ ಓಪನ್ ಮಾಡಬಾರದು ಎಂದು ಕೇಳಿದ್ದಾರೆ. ಈ ನೋಟಿಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಿಜೆಪಿ ಬೆಂಬಲಿಗರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮಾತ್ರವಲ್ಲ ಬಿಜೆಪಿ ನಾಯಕರ ವಿರುದ್ಧ ಕೂಡ ಕಿಡಿ ಕಾರುತ್ತಿದ್ದಾರೆ.

ಶಕುಂತಲಾ ನಟರಾಜ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಪೋಸ್ಟ್‌ಗಳನ್ನು ಹಾಕುವ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಾರೆ. 2023ರ ಅಕ್ಟೋಬರ್ 10ರಂದು ಲುಲು ಮಾಲ್‌ನಲ್ಲಿ ಭಾರತ ಧ್ವಜಕ್ಕಿಂತ ಎತ್ತರದಲ್ಲಿ ಬೇರೆ ಧ್ವಜ ಹಾರಿಸಲಾಗಿದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. ಬಾಯ್ಕಾಟ್ ಲುಲುಮಾಲ್ ಬೆಂಗಳೂರು ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಸಂಬಂಧಿಸಿದಂತೆ ತುಮಕೂರು ಜಯನಗರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 12, 2023ರಂದು ಪ್ರಕರಣ ದಾಖಲಾಗಿತ್ತು.

Police Plan to Open Rowdy Sheet Against BJP Supporter Shakunthala

ಇದೀಗ ಉತ್ತರ ಪ್ರದೇಶದ ಗಲಭೆಯನ್ನು ಉಲ್ಲೇಖಿಸಿ ಶಕುಂತಲಾ ನಟರಾಜ್ ಮಾಡಿರುವ ಟ್ವೀಟ್ ಆಧರಿಸಿ ಮತ್ತೊಂದು ದೂರು ದಾಖಲಿಸಿಕೊಂಡಿರುವ ಜಯನಗರ ಪೊಲೀಸರು, ಜಾತಿ ಜಾತಿಗಳ ನಡುವೆ ವೈಷಮ್ಯ ಬರುವಂತೆ ಪೋಸ್ಟ್ ಹಾಕಿಕೊಂಡಿದ್ದು, ಕೋಮು ಸೌಹಾರ್ದತೆಗೆ ಧಕ್ಕೆ ಬರುವಂತಹ ಪೋಸ್ಟರ್ ಹಾಕಿ ಜನರ ಭಾವನೆ ಕೆರಳಿಸುವವ ಚಟುವಟಿಕೆ ಮಾಡುತ್ತಿದ್ದು ನಿಮ್ಮ ಮೇಲೆ ನಿಗಾ ವಹಿಸಲು ರೌಡಿ ಶೀಟ್ ಯಾಕೆ ತರೆಯಬಾರದು ಎನ್ನುವುದಕ್ಕೆ ನೋಟಿಸ್ ನೀಡಿದ 7 ದಿನಗಳ ಒಳಗಾಗಿ ಸೂಕ್ತ ಉತ್ತರ ಕೊಡುವಂತೆ ಕೇಳಲಾಗಿದೆ.

ಬಿಜೆಪಿ ಬೆಂಬಲಿಗರ ಆಕ್ರೋಶ

ಎಕ್ಸ್‌ ಪೋಸ್ಟ್ ಉಲ್ಲೇಖಿಸಿ ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲೆ ರೌಡಿ ಶೀಟ್ ತೆರೆಯಲು ನೋಟಿಸ್ ಕೊಟ್ಟಿರುವ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ ಟೀಕೆಯನ್ನು ಕೂಡ ಸಹಿಸದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ರೌಡಿ ಶೀಟ್ ತೆರೆಯುವ ನೋಟಿಸ್ ವಾಪಸ್ ಪಡೆಯುವಂತೆ ಆಗ್ರಹಿಸಲಾಗಿದೆ.

ಬಿಜೆಪಿ ನಾಯಕರ ವಿರುದ್ಧವೂ ಆಕ್ರೋಶ

ಕಾಂಗ್ರೆಸ್ ಸರ್ಕಾರ ಮಾತ್ರವಲ್ಲದೆ, ಕಾರ್ಯಕರ್ತೆಯ ಪರವಾಗಿ ಮಾತನಾಡದ ರಾಜ್ಯ ಬಿಜೆಪಿ ನಾಯಕರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ನಿಲ್ಲದ ಬಿಜೆಪಿ ನಾಯಕರು ನಾಲಾಯಕ್‌ಗಳು, ಹೀಗೇನಾ ನಿಮ್ಮ ಕಾರ್ಯಕರ್ತರನ್ನು ರಕ್ಷಣೆ ಮಾಡುವುದು ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಮಾತ್ರ ಶಕುಂತಾಲಗೆ ಬೆಂಬಲ ನೀಡಿದ್ದು, ಎದೆಗುಂದಬೇಡಿ ನಿಮ್ಮೊಂದಿಗೆ ನಾವಿದ್ದೇವೆ, ನಿಮ್ಮ ಕಾನೂನು ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+