ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು: ಪೊಲೀಸರ ಕಣ್ಣು ತಪ್ಪಿಸಿ ವಾಹನದಲ್ಲಿ ಹಣ ಸಾಗಣೆ

By ಕುಮಾರಸ್ವಾಮಿ
|
Google Oneindia Kannada News

ತುಮಕೂರು, ಏಪ್ರಿಲ್ 18: ಕುಣಿಗಲ್‌ ಸಮೀಪದಲ್ಲಿ ಟಾಟಾ ಏಸ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಹಣ ರಸ್ತೆಗೆ ಬಿದ್ದಿದೆ. ಚುನಾವಣೆಯಲ್ಲಿ ಬಳಸಲು ಇದನ್ನು ಒಯ್ಯಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್ ಸಮೀಪದ ಆಲಪ್ಪನ ಗುಡ್ಡೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಮೀಪದಲ್ಲಿ ಘಟನೆ KA 02 AG 5648 ಸಂಖ್ಯೆಯ ಟಾಟಾ ಏಸ್ ವಾಹನದಲ್ಲಿ ಹಣ ಕೊಂಡೊಯ್ಯಲಾಗುತ್ತಿತ್ತು.

ದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರುದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರು

ಕೆಳಗೆ ಬಿದ್ದ ಹಣವನ್ನು ವಾಹನ ಚಾಲಕನೇ ತರಾತುರಿಯಲ್ಲಿ ಬೇರೆ ಕವರ್‌ಗೆ ತುಂಬಿ ಕೊಂಡೊಯ್ದಿದ್ದಾನೆ, 'ಪೊಲೀಸರು ಬಂದು ಬಿಟ್ಟಾರು ಬೇಗ ತುಂಬು ಎಂದು ಟಾಟಾ ಏಸ್‌ ವಾಹನದಲ್ಲಿದ್ದವರು ಮಾತನಾಡಿಕೊಂಡಿದ್ದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ.

Money transporting in a van. suspected as election money

ಚುನಾವಣೆಯಲ್ಲಿ ಬಳಸಲೆಂದು ಈ ಹಣವನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡಿದೆ. ನೀತಿ ಸಂಹಿತೆ ಜಾರಿಯಾದ ನಂತರ ಎಲ್ಲೆಡೆ ಪೊಲೀಸರು ತಪಾಸಣೆ ನಡೆಸುತ್ತಿದ್ದರೂ ಈ ವಾಹನ ಪೊಲೀಸರ ಕಣ್ಣುತಪ್ಪಿಸಿ ಬಂದದ್ದು ಹೇಗೆ ಎಂಬ ಅನುಮಾನ ವ್ಯಕ್ತವಾಗಿದೆ.

ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!ನಗದು, ಸೀರೆ, ಮದ್ಯ, ಪಾತ್ರೆಪಡಗ, ಲ್ಯಾಪ್ ಟಾಪ್!

ಇದೇ ಘಟನೆಗೆ ಸಂಬಂಧಪಟ್ಟದ್ದು ಎನ್ನಲಾಗಿರುವ ವಿಡಿಯೋ ಒಂದು ವೈರಲ್ ಆಗಿದ್ದು ಸುದ್ದಿ ಮಾಧ್ಯಮಗಳಲ್ಲಿಯೂ ಪ್ರಸಾರವಾಗುತ್ತಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನೆಲದಲ್ಲಿ ಬಿದ್ದಿರುವ ಹಣವನ್ನು ಹೆಕ್ಕಿ ಚೀಲದಲ್ಲಿ ತುಂಬುತ್ತಿದ್ದಾನೆ ಆದರೆ ಈ ವಿಡಿಯೋ ಯಾವಾಗಿನದು ಎಂಬುದರ ಬಗ್ಗೆ ಪೂರ್ಣ ಮಾಹಿತಿ ಇಲ್ಲ.

English summary
Near Tumkur's Kunigal money transporting in a Tata Ace vehicle. while transporting some bank notes fell down and driver urgently put it back before the police came and went.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X