Get Updates
Get notified of breaking news, exclusive insights, and must-see stories!

Tumkur Rural: ಬಿಜೆಪಿಯ ಸುರೇಶ್ ಗೌಡ - ಜೆಡಿಎಸ್‌ನ ಗೌರಿಶಂಕರ್ ನಡುವೆ ನೇರ ಹಣಾಹಣಿ : ಶಾಕ್ ಕೊಡುತ್ತಾ ಕಾಂಗ್ರೆಸ್‌?

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ಇಡೀ ಜಿಲ್ಲೆಯಲ್ಲಿ ತನ್ನದೇ ಕಾರಣಕ್ಕೆ ಗಮನ ಸೆಳೆದಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ, ತೀವ್ರ ಸ್ಪರ್ಧೆ ಸಾಮಾನ್ಯ ಎನ್ನುವಂತಾಗಿದೆ. ಸದ್ಯ ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ವಾಪಸ್ ಪಡೆಯಲು ಬಿಜೆಪಿ ರಣತಂತ್ರ ರೂಪಿಸಿದ್ದರೆ ಕಾಂಗ್ರೆಸ್ ಕೂಡ ಶಾಕ್ ನೀಡಲು ಸಜ್ಜಾಗಿದೆ.

ಶ್ರೀ ಕ್ಷೇತ್ರ ಸಿದ್ದಗಂಗಾ ಮಠ, ಗೂಳೂರು, ಕೈದಾಳ, ಮಲ್ಲಸಂದ್ರ, ನಾಗವಲ್ಲಿ ಸೇರಿದಂತೆ ಪ್ರಮುಖ ಊರುಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ನೇರಹಣಾಹಣಿ ಇದೆ. 2013ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಗೌಡ ಶಾಸಕರಾಗಿದ್ದರೆ, 2018ರಲ್ಲಿ ಜೆಡಿಎಸ್‌ನ ಡಿ.ಸಿ ಗೌರಿಶಂಕರ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

 Karnataka Election, Tumkur Rural Fight: DC Gowrishankarh vs B Suresh Gowda vs Shanmukhappa

ಹಾಲಿ ಶಾಸಕ ಗೌರಿಶಂಕರ್ ಮತ್ತೆ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ಬಲ ಹೆಚ್ಚಿಸುವ ಉದ್ದೇಶದಲ್ಲಿದ್ದರೆ, ಕಳೆದ ಬಾರಿ ಸೋಲಿಗೆ ಸೇಡು ತೀರಿಸಿಕೊಳ್ಳಲು ರಣತಂತ್ರ ರೂಪಿಸುತ್ತಿದ್ದಾರೆ ಬಿಜೆಪಿ ಅಭ್ಯರ್ಥಿ ಬಿ. ಸುರೇಶ್‌ ಗೌಡ, ಕಾಂಗ್ರೆಸ್ ಈ ಬಾರಿ ಷಣ್ಮುಗಪ್ಪ ಯಾದವ್ ಎನ್ನುವವರಿಗೆ ಟಿಕೆಟ್ ಕೊಟ್ಟಿದ್ದು, ಜೆಡಿಎಸ್ ಮತ್ತು ಬಿಜೆಪಿಗೆ ಶಾಕ್ ನೀಡಲು ಸಜ್ಜಾಗಿದೆ.

ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 1,99,667 ಮತದಾರರಿದ್ದು, 1,00,050 ಪುರುಷರು ಮತ್ತು 99,521 ಮಹಿಳೆಯರು ಇದ್ದಾರೆ. ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಒಟ್ಟು ಜನಸಂಖ್ಯೆ 2,90,254 ಆಗಿದೆ. ಲಿಂಗಾಯತ, ತಿಗಳ, ಒಕ್ಕಲಿಗ, ದಲಿತ, ಮುಸ್ಲಿಂ ಮತಗಳು ಇಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಜೆಡಿಎಸ್ - ಬಿಜೆಪಿ ನೇರ ಹಣಾಹಣಿ

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಗೌರಿಶಂಕರ್ 82,740 ಮತಗಳನ್ನು ಪಡೆದುಕೊಂಡರೆ, ಬಿ. ಸುರೇಶ್ ಗೌಡ 77,100 ಮತಗಳನ್ನು ಪಡೆದುಕೊಂಡಿದ್ದರು. ಗೆಲುವಿನ ಅಂತರ ಕೇವಲ 5640 ಮತಗಳಾಗಿತ್ತು. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ನಿಂದ ನಿಂತಿದ್ದ ಆರ್ ಎಸ್ ರವಿಕುಮಾರ್ ಕೇವಲ 7,633 ಮತಗಳನ್ನು ಪಡೆದುಕೊಂಡಿದ್ದರು.

ಕಳೆದ ಚುನಾವಣೆಯನ್ನು ಗಮನಿಸಿದರೆ ಕಾಂಗ್ರೆಸ್ ಇಲ್ಲಿ ಲೆಕ್ಕಕ್ಕುಂಟು ಆಟಕ್ಕಿಲ್ಲ ಎನ್ನುವಂತಿದೆ. ಕಾಂಗ್ರೆಸ್ ನಾಯಕರು ಕೂಡ ಈ ಕ್ಷೇತ್ರದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ರಾಜ್ಯ ಮಟ್ಟದ ನಾಯಕರು ಇತ್ತ ಪ್ರಚಾರ ಮಾಡಲು ಹೋಗಿಲ್ಲ. ಇಲ್ಲೇನಿದ್ದರೂ ದಳಪತಿಗಳು ಮತ್ತು ಬಿಜೆಪಿಯವರ ನಡುವಿನ ಹೋರಾಟ.

ದಳಪತಿಗಳು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಭರ್ಜರಿಯಾಗಿ ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ಕೂಡ ಕ್ಷೇತ್ರವನ್ನು ಮರಳಿ ಪಡೆಯಲು ರಣತಂತ್ರ ರೂಪಿಸುತ್ತಿದೆ. ಗೌರಿಶಂಕರ್ ಕ್ಷೇತ್ರದಲ್ಲಿ ಜನರ ಜೊತೆ ಬೆರೆಯುತ್ತಾ, ಯುವ ನಾಯಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿರುವುದು, ಅವರ ಗೆಲುವಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.

ಬಿ. ಸುರೇಶ್ ಗೌಡ ತಮ್ಮ ಅವಧಿಯಲ್ಲಿ ಮಾಡಿದ್ದ ಅಭಿವೃದ್ಧಿ ಕೆಲಸಗಳನ್ನು ಪ್ರಚಾರ ಮಾಡುತ್ತಾ ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಸುರೇಶ್ ಗೌಡ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಜನರ ಮೆಚ್ಚುಗೆ ಪಡೆದುಕೊಂಡಿದ್ದರು.

ಮುಳುವಾಗುತ್ತಾ ನ್ಯಾಯಾಲಯದ ತೀರ್ಪು?

2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಗೌರಿಶಂಕರ್ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು, ಮತದಾರರಿಗೆ ನಕಲಿ ಬಾಂಡ್ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೌರಿಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ತೀರ್ಪು ನೀಡಿತ್ತು.

2018ರ ವಿಧಾನಸಭೆ ಚುನಾವಣೆಗೆ ಮುನ್ನ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ 32 ಸಾವಿರ ವಯಸ್ಕರು ಮತ್ತು 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಬಾಂಡ್ ಪಾಲಿಸಿ ವಿತರಣೆ ಮಾಡಿದ್ದಾರೆ ಎಂದು ಗೌರಿಶಂಕರ್ ವಿರುದ್ಧ ಮಾಜಿ ಶಾಸಕ ಬಿ.ಸುರೇಶ್ ಗೌಡ ದೂರು ದಾಖಲಿಸಿದ್ದರು. 5 ವರ್ಷಗಳ ವಿಚಾರಣೆ ಬಳಿಕ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ನೀಡಿದ್ದು, ಗೌರಿಶಂಕರ್ ಆಯ್ಕೆಯನ್ನು ಅಸಿಂಧುಗೊಳಿಸಿತ್ತು. ಅಲ್ಲದೆ ಮುಂದಿನ 6 ವರ್ಷಗಳವರೆಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶಿಸಲಾಗಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಗೌರಿಶಂಕರ್ ಮಧ್ಯಂತರ ತಡೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಜೆಪಿಗೆ ಸಿಕ್ಕಿದೆ ಪ್ರಮುಖ ಅಸ್ತ್ರ

ಶಾಕಸ ಗೌರಿಶಂಕರ್ ವಿರುದ್ಧ ಇದೇ ಆರೋಪಗಳನ್ನು ಇಟ್ಟುಕೊಂಡು ಮತದಾರರನ್ನು ತನ್ನತ್ತ ಸೆಳೆಯುವ ವಿಶ್ವಾಸದಲ್ಲಿದ್ದಾರೆ, ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ತಮ್ಮ ಕೈಹಿಡಯಲಿವೆ, ತುಮಕೂರು ಗ್ರಾಮಾಂತರದಲ್ಲಿ ಮತ್ತೆ ಕಮಲ ಅರಳುತ್ತೆ ಎನ್ನುವ ವಿಶ್ವಾಸ ಬಿಜೆಪಿ ಅಭ್ಯರ್ಥಿ ಬಿ. ಸುರೇಶ್‌ಗೌಡ.

ಒಟ್ಟಾರೆ ಈ ಬಾರಿ ಕೂಡ ಕಳೆದ ಬಾರಿಯ ಚುನಾವಣೆಯಂತೆ ಇಬ್ಬರ ನಡುವೆ ರೋಚಕ ಹಣಾಹಣಿ ನಿರೀಕ್ಷೆ ಮಾಡಲಾಗಿದೆ. ಯಾರೇ ಗೆದ್ದರೂ ಕೆಲವೇ ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಅಷ್ಟೇ ಎನ್ನುವಷ್ಟರ ಮಟ್ಟಿಗೆ ತಮ್ಮ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಮೇ 13ರಂದು ಮತದಾರ ಯಾರ ಕಡೆಗೆ ವಾಲಿದ್ದಾನೆ ಎನ್ನುವುದು ತಿಳಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+