ಕಾಂಗ್ರೆಸ್ ಜತೆಗೆ ದೋಸ್ತಿ, ಜೆಡಿಎಸ್ ರವಿಕುಮಾರ್ ತುಮಕೂರು ಮೇಯರ್

ಕಾಂಗ್ರೆಸ್ ಜತೆಗೆ ದೋಸ್ತಿ ಮಾಡಿಕೊಂಡಿದ್ದರಿಂದ ತುಮಕೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ನ ರವಿಕುಮಾರ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪರ್ಜಾನ ಖಾನಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ತುಮಕೂರು, ಮಾರ್ಚ್ 4: ಜೆಡಿಎಸ್ ನಿಂದ 22ನೇ ವಾರ್ಡ್ ಗೆ ಚುನಾಯಿತರಾಗಿದ್ದ ಎಚ್.ರವಿಕುಮಾರ್ ತುಮಕೂರು ಮಹಾನಗರ ಪಾಲಿಕೆ ಮೇಯರ್ ಆಗಿ ಶನಿವಾರ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಜತೆಗೆ ಒಪ್ಪಂದ ಮಾಡಿಕೊಂಡು ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿದಿದೆ. ಮೇಯರ್ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಎಂ (ಎ) ಮಹಿಳೆಗೆ ಮೀಸಲಾಗಿತ್ತು.

ಕಾಂಗ್ರೆಸ್ ನ ಪರ್ಜಾನ ಖಾನಂ ಅವರು ಉಪಮೇಯರ್ ಆಗಿದ್ದಾರೆ. ಮುಖ್ಯ ಚುನಾವಣಾಧಿಕಾರಿಯಾಗಿ ಎಂ.ವಿ.ಜಯಂತಿ ಕಾರ್ಯನಿರ್ವಹಿಸಿದರು. ಹೊಸ ಮೇಯರ್ ರವಿಕುಮಾರ್ ಮಾಧ್ಯಮದವರ ಜತೆಗೆ ಮಾತನಾಡಿ, ಕುಡಿಯುವ ನೀರು ಪೂರೈಕೆಗೆ ಮೊದಲ ಆದ್ಯತೆ. ಇನ್ನು ಹತ್ತು ದಿನದೊಳಗೆ ಮೈದಾಳ ಕೆರೆಯಿಂದ ತುಮಕೂರು ನಗರಕ್ಕೆ ನೀರು ತರುವುದಾಗಿ ಹೇಳಿದರು.['ಹೈಕಮಾಂಡ್ ಸಲಹೆ ಪಾಲಿಸದ ಬಿಎಸ್ ವೈ, ಮೂಲ ಕಾರ್ಯಕರ್ತರಿಗೆ ಅನ್ಯಾಯ']

Tumakuru Mayor

ಇನ್ನು ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ ಮೂರು ಕೊಳವೆ ಬಾವಿ ಕೊರೆಸುತ್ತೇವೆ. ಇದಕ್ಕಾಗಿಯೇ ಪಾಲಿಕೆಯಲ್ಲಿ ನಾಲ್ಕು ಕೋಟಿ ರುಪಾಯಿ ಮೀಸಲಿಡಲಾಗಿದೆ. ಮುಂಬರುವ ದಿನದಲ್ಲಿ ವಿದ್ಯುತ್ ಚಿತಾಗಾರ ಆರಂಭಿಸಲಾಗುವುದು ಎಂದು ಹೇಳಿದ ಅವರು, ನಗರ ವ್ಯಾಪ್ತಿಯಲ್ಲಿ ಪಾಲಿಕೆ ಆಸ್ತಿ ಅಥವಾ ಉದ್ಯಾನಗಳನ್ನು ಒತ್ತುವರಿ ಮಾಡಿರುವವರಿಂದ ತೆರವು ಮಾಡಿಸುವುದಾಗುವುದು. ಎಂಥ ಪ್ರಭಾವಿಗಳಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.[ಹಸಿದ ಅನ್ನದಾತರ ಹೊಟ್ಟೆ ತುಂಬಿಸಲಿದೆ ಡಿಸಿಸಿ ಬ್ಯಾಂಕ್: ಕೆಎನ್ನಾರ್]

ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಚನ್ನಿಗಪ್ಪ, ಶಾಸಕ ಎಸ್ ಆರ್ ಶ್ರೀನಿವಾಸ್, ಮಾಜಿ ಶಾಸಕ ಗೌರಿಶಂಕರ್, ಜಹಾಂಗೀರ್ ರವೀಶ್ ಮತ್ತು ಇತರ ಪಾಲಿಕೆ ಸದಸ್ಯರಿಗೆ ರವಿಕುಮಾರ್ ಧನ್ಯವಾದ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+