ತುಮಕೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮ ಯುದ್ಧ ಪ್ರಾರಂಭಿಸಲು ಲೋಕಾಯುಕ್ತ ನ್ಯಾಯಾಧೀಶರಿಗೆ ಇರಿದ!

By Manjunatha
|
Google Oneindia Kannada News

ತುಮಕೂರು, ಮಾರ್ಚ್ 08: ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಗೆ ಚೂರಿ ಇರಿದು ಈಗ ಪೊಲೀಸರ ಅತಿಥಿ ಆಗಿರುವ ಆರೋಪಿ ತೇಜರಾಜ್ ಶರ್ಮಾ ವಿಚಾರಣೆ ವೇಳೆ ಚಿತ್ರ ವಿಚಿತ್ರ ವಿಷಯಗಳು ಹೊರ ಬರುತ್ತಿವೆ.

'ನಾನು ವಿಶಾಖ ನಕ್ಷತ್ರದವನು, ಅರ್ಜುನ ಕೂಡ ವಿಶಾಖ ನಕ್ಷತ್ರದವನು, ಈ ನಕ್ಷತ್ರದವರು ಬುಧವಾರ ಹೋರಾಟ ಪ್ರಾರಂಭ ಮಾಡಿದರೆ ಗೆಲುವಾಗುತ್ತದೆ, ಹಾಗಾಗಿ ನಾನು ಬುಧವಾರದಂದೇ ನ್ಯಾಯಮೂರ್ತಿಗಳಿಗೆ ಚೂರಿ ಹಾಕಿದೆ, ಶ್ರೀಕೃಷ್ಣ ಕೂಡ ಅರ್ಜುನನಿಗೆ ಬುಧವಾರದಂದೇ ಹೋರಾಟ ಪ್ರಾರಂಭ ಮಾಡುವಂತೆ ಹೇಳಿದ್ದ' ಎಂದಿದ್ದಾನೆ ತೇಜರಾಜ್ ಶರ್ಮಾ.

ಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ ಪ್ರಕರಣ ಸಿಸಿಬಿ ತನಿಖೆಗೆಲೋಕಾಯುಕ್ತ ನ್ಯಾಯಮೂರ್ತಿಗೆ ಚಾಕು ಇರಿತ ಪ್ರಕರಣ ಸಿಸಿಬಿ ತನಿಖೆಗೆ

ಆತನ ಮನೆ ತಪಾಸಣೆ ಮಾಡಲು ಆರೋಪಿಯನ್ನು ಇಂದು ತುಮಕೂರಿನ ಬಿದಿರು ಮಳೆ ಬಡಾವಣೆಗೆ ಕರೆತರಲಾಗಿತ್ತು. ಇದೇ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ಆರೋಪಿ ತೇಜರಾಜ್ ಶರ್ಮಾ ವಾಸವಿದ್ದ.

Interrogation details of judge murder attempt accused Tejraj Sharma

ತೇಜರಾಜ್ ಶರ್ಮಾ ಮನೆಗೆ ಹೋದ ಪೊಲೀಸರಿಗೆ ಆಶ್ಚರ್ಯ ಕಾದಿತ್ತು, ಅಲ್ಲಿ ಏಕಾಗ್ರತೆ, ಇಂದ್ರಜಾಲ, ಮಾಟ-ಮಂತ್ರಗಳಿಗೆ ಸಂಬಂಧಪಟ್ಟ ಪುಸ್ತಗಳು ದೊರೆತವು. ಈ ಪುಸ್ತಕಗಳನ್ನು ಏಕೆ ಓದುತ್ತೀಯೆಂದು ಪೊಲೀಸರು ತೇಜರಾಜ್ ಶರ್ಮಾ ಗೆ ಪ್ರಶ್ನಿಸಿದರು. ಕೊಠಡಿಯ ಬಾಗಿಲಿಗೆ ದೃಷ್ಟಿ ಗೊಂಬೆಯ ತರಹದ ಗೊಂಬೆಯನ್ನು ಕಟ್ಟಿದ್ದರ ಬಗ್ಗೆಯೂ ತನಿಖಾಧಿಕಾರಿಗಳು ಪ್ರಶ್ನೆ ಮಾಡಿದ್ದಾಗಿ ತಿಳುದು ಬಂದಿದೆ.

ನ್ಯಾ.ಶೆಟ್ಟಿ ಕೊಲೆಗೆ ಯತ್ನಿಸಿದ ಆರೋಪಿ 5 ದಿನ ಪೊಲೀಸರ ವಶಕ್ಕೆನ್ಯಾ.ಶೆಟ್ಟಿ ಕೊಲೆಗೆ ಯತ್ನಿಸಿದ ಆರೋಪಿ 5 ದಿನ ಪೊಲೀಸರ ವಶಕ್ಕೆ

ಆ ನಂತರ ಆರೋಪಿಗೆ ಮನೆ ಬಾಡಿಗೆಗೆ ನೀಡಿದ್ದ ವೆಂಕಟಲಕ್ಷ್ಮಿ ಎಂಬುವರನ್ನೂ ತನಿಖಾ ತಂಡ ಪ್ರಶ್ನೆ ಮಾಡಿತು. ಆರೋಪಿಗೆ ಮನೆ ಬಾಡಿಗೆಗೆ ನೀಡಬೇಕಾದರೆ ಮಾಡಿಕೊಮಡಿರುವ ಅಗ್ರಿಮೆಂಟ್, ಆತನ ವ್ಯವಹಾರ, ನಡತೆ, ಮಾತು-ಕತೆಗಳ ಬಗ್ಗೆ ಅವರು ಪ್ರಶ್ನೆ ಮಾಡಿ ಉತ್ತರ ಪಡೆದಿದ್ದಾರೆ.

ಇದೀಗ ಈ ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದು, ಇನ್ನು ಮುಂದಿನ ತನಿಖೆಯನ್ನು ಅವರೇ ಮಾಡಲಿದ್ದಾರೆ.

ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?ಯಾರೀತ ತೇಜ್ ರಾಜ್ ಶರ್ಮ, ಹತಾಶೆಗೊಂಡ ದೂರುದಾರ?

English summary
Tejraj Sharma's who stabbed Lokayukta judge Vishwanath Shetty, his interrogation is in progress. Police visited Tejraj Sharma's residence in Tumakur and inception the house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X