ಅಡಿಕೆ ಮರ ಕಡಿಸಿದ ಗ್ರಾಮ ಲೆಕ್ಕಿಗ ಅಮಾನತು, ತಹಶೀಲ್ದಾರ್ ವರ್ಗಾವಣೆ

ಗುಬ್ಬಿ, ಮಾರ್ಚ್ 11: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ಅಡಿಕೆ ಮರ ಕಡಿಸಿದ ಗ್ರಾಮ ಲೆಕ್ಕಿಗರನ್ನು ಅಮಾನತು ಮಾಡಲಾಗಿದೆ. ತಹಶೀಲ್ದಾರ್‌ರನ್ನು ವರ್ಗಾವಣೆ ಮಾಡಲು ಆದೇಶ ನೀಡಲಾಗಿದೆ.

ಮುಜರಾಯಿ ಇಲಾಖೆಗೆ ಸೇರಿದ ಜಮೀನು ಎಂಬ ಕಾರಣ ನೀಡಿ 170 ಅಡಿಕೆ ಮರ ಹಾಗೂ 50 ತೆಂಗಿನಮರಗಳನ್ನು ಕಡಿಸಿದ್ದರು. ತಹಶೀಲ್ದಾರ್ ಮಮತಾ ಆದೇಶ ಮೇಲೆ ಈ ರೀತಿ ಮಾಡುತ್ತಿದ್ದೇವೆ, ಎಂದು ಗ್ರಾಮ ಲೆಕ್ಕಿಗ ನೂರಾರೂ ಮರಗಳ ಮಾರಣ ಹೋಮ ನಡೆಸಿದ್ದರು.

ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಘಟನೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು. ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ಕೆಲಸಕ್ಕೆ ಜನರು ಆಕ್ರೋಶಗೊಂಡಿದ್ದರು. ಇದೀಗ ಈ ಘಟನೆಯ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ.

Gubbi Tahsildar Mamatha Transferred

ಜಿಲ್ಲಾಧಿಕಾರಿ ಡಾ ರಾಕೇಶ್ ಕುಮಾರ್, ತಹಶೀಲ್ದಾರ್ ಮಮತಾರನ್ನು ಗುಬ್ಬಿಯಿಂದ ಬೇರೊಂದು ಕಡೆ ವರ್ಗಾವಣೆ ಮಾಡಿದ್ದಾರೆ. ಗ್ರಾಮ ಲೆಕ್ಕಿಗನನ್ನು ಅಮಾನತು ಮಾಡಲಾಗಿದೆ.

ಸಿದ್ದಮ್ಮ ಎಂಬ ಅಜ್ಜಿ ನೂರಾರೂ ಅಡಿಕೆ ಹಾಗೂ ತೆಂಗಿನ ಮರಳನ್ನು ಬೆಳೆಸಿದ್ದರು. ದೇವಸ್ಥಾನದ ಜಾತ್ರೆ ನಡೆಯುವ ಸಲುವಾಗಿ, ಮುಜರಾಯಿ ಇಲಾಖೆಗೆ ಸೇರಿದೆ ಎಂದು ಮರಳಗನ್ನು ಕಡಿಯಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+