ಕಳ್ಳಂಬೆಳ್ಳ : 4 ಪಾದಚಾರಿಗಳ ಬಲಿ ಪಡೆದ ವಾಹನ
ತುಮಕೂರು, ಜನವರಿ, 14: ಅವರು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದರು. ಇಂದೇ ನಮ್ಮ ಜೀವನದ ಕೊನೆಯ ದಿನವಾಗುತ್ತದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ. ವೇಗವಾಗಿ ಬಂದ ವಾಹನ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಹರಿದು ಹೋಗಿತ್ತು.
ತುಮಕೂರು ಜಿಲ್ಲೆ ಶಿರಾದ ದೊಡ್ಡಾಲದಮರ ಗ್ರಾಮ ಇಂಥದ್ದೊಂದು ಘೋರ ದುರಂತಕ್ಕೆ ಗುರುವಾರ ಸಾಕ್ಷಿಯಾಗಿದೆ. ವೇಗವಾಗಿ ಬಂದ ಕಾರು ಹರಿದು ಹೋದ ಪರಿಣಾಮ ಮೂವರು ಮಹಿಳೆಯರು ಹಾಗೂ ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ವಿದ್ಯಾರ್ಥಿ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.[ಬೆಂಗಳೂರಲ್ಲಿ ಟ್ಯಾಂಕರ್ ಹರಿದಿತ್ತು]

ಈ ಸಂಬಂಧ ಶಿರಾ ತಾಲೂಕಿನ ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುರ್ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಕುಟುಂಬದವರನ್ನು ಕಳೆದುಕೊಂಡವರ ರೋಧನ ಮುಗಿಲು ಮುಟ್ಟಿದೆ. ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಜಯಚಂದ್ರ, ಪೊಲೀಸ್ ವರಿಷ್ಠಾಧಿಕಾರಿ ಕಾರ್ತೀಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.[ಸಲ್ಮಾನ್ ಖಾನ್ ಹಿಟ್ ಅಂಡ್ ರನ್ ರಿಲೀಸ್ ಟೈಮ್ ಲೈನ್]












Click it and Unblock the Notifications