ಸಿದ್ದಗಂಗಾ ಮಠದ ಬಳಿ ನೀರಿನಲ್ಲಿ ಮುಳುಗಿ ನಾಲ್ವರ ಸಾವು
ತುಮಕೂರು, ಆಗಸ್ಟ್ 13: ಗೋಕಟ್ಟೆಯಲ್ಲಿ ಮುಳುಗಿ ನಾಲ್ವರು ಸಾವನ್ನಪ್ಪಿದ ದಾರುಣ ಘಟನೆ, ಕ್ಯಾತಸಂದ್ರದ ಸಿದ್ಧಗಂಗಾ ಮಠದ ಬಳಿ ನಡೆದಿದೆ. ಸಿದ್ಧಗಂಗಾ ಮಠದ ಹಿಂಭಾಗದಲ್ಲಿರುವ ಗೋಕಟ್ಟೆಯಲ್ಲಿ ಈ ದುರಂತ ನಡೆದಿದೆ.
ಕೈಕಾಲು ತೊಳೆಯಲು ಹೋದ ಇಬ್ಬರು ವಿದ್ಯಾರ್ಥಿಗಳು ಮುಳುಗಿದ್ದಾರೆ ಇವರನ್ನು ರಕ್ಷಿಸಲು ಹೋದ ಮಹಿಳೆ ಕೂಡ ಮುಳುಗಿದ್ದು ಇದನ್ನು ಕಂಡ ಮತ್ತೊಬ್ಬ ವ್ಯಕ್ತಿ ಕೂಡ ರಕ್ಷಣೆ ಧಾವಿಸಿದ್ದು ಅವರು ಕೂಡ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತ ಬಾಲಕರನ್ನು ಶಂಕರ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ. ರಕ್ಷಿಸಲು ಹೋಗಿ ಮೃತಪಟ್ಟ ಮಹಿಳೆಯನ್ನು ಲಕ್ಷ್ಮಿ ಎಂದು ಗುರುರಿಸಲಾಗಿದ್ದು, ಸ್ಥಳೀಯರಾದ ಮಹಾದೇವಪ್ಪ ಕೂಡ ರಕ್ಷಣೆಗೆ ಧಾವಿಸಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳಾದ ಶಂಕರ್ ಹಾಗೂ ರಕ್ಷಿತ್ ರಾಮನಗರ ನಿವಾಸಿಗಳಾಗಿದ್ದಾರೆ. ಲಕ್ಷ್ಮಿ ಎನ್ನುವವರು ನೆಲಮಂಗಲ ನಿವಾಸಿಯಾಗಿದ್ದು, ಮಹಾದೇವಪ್ಪ ಯಾದಗಿರಿ ನಿವಾಸಿಯಾಗಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ರಂಜಿತ್ ಎನ್ನುವ ವಿದ್ಯಾರ್ಥಿಯನ್ನು ರಕ್ಷಣೆ ಮಾಡಲಾಗಿದೆ.
ಘಟನೆ ಸಂಬಂಧ ಕ್ಯಾತ್ಸಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications