ತುಮಕೂರು:ಮಾರಮ್ಮನ ಆಜ್ಞೆಯೆಂದು ಊರುಬಿಟ್ಟಿದ್ದ 60 ಕುಟುಂಬ ವಾಪಸ್
ತುಮಕೂರು, ಏಪ್ರಿಲ್ 10: ಮಾರಮ್ಮನ ಆಜ್ಞೆಯಾಗಿದೆ ಎಂದು ಊರು ತೊರೆದಿದ್ದ ತುಮಕೂರಿನ 60 ಕುಟುಂಬ ಮರಳಿ ಬಂದಿದೆ.
ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮೂರು ದಿನ ಊರು ಬಿಡುವಂತೆ ಗ್ರಾಮ ದೇವತೆ ಮಾರಮ್ಮನ ಆಜ್ಞೆಯಾಗಿದೆ ಎಂದು 60 ಕುಟುಂಬ ಊರು ತೊರೆದಿತ್ತು.
ಗ್ರಾಮದ ಪ್ರವೇಶ ದ್ವಾರಕ್ಕೆ ಮುಳ್ಳು ಬೇಲಿ ಹಾಕಿ ಊರು ಖಾಲಿ ಮಾಡಿ ಊರಾಚೆಯ ಜಮೀನುಗಳಲ್ಲಿ ಗುಡಿಸಲು ಹಾಕಿ ವಾಸ ಮಾಡಲು ಶುರು ಮಾಡಿದ್ದರು.

ಕುರಿ, ಕೋಳಿ, ನಾಯಿ ಎಲ್ಲವನ್ನೂ ಗ್ರಾಮದ ಹೊರಗಿರುವ ತಮ್ಮ ತಮ್ಮ ಜಮೀನಿಗೆ ಕರೆದೊಯ್ದಿದ್ದರು.ಗ್ರಾಮ ಬಿಟ್ಟು ಹೋಗಿದ್ದ ಜನರ ಬಳಿ ಹೋಗಿ ಕರಟಗೆರೆ ತಹಶೀಲ್ದಾರ್ ಮನವಿ ಮಾಡಿದ್ದು, ಜನರು ಕೊನೆಗೂ ತಮ್ಮ ಮನೆಗಳಿಗೆ ಆಗಮಿಸಿದ್ದಾರೆ.
ಈ ಘಟನೆ ಕುರಿತು ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತುಮಕೂರಿನಲ್ಲಿ ಕೊರೊನಾಗೆ ಓರ್ವ ವೃದ್ಧ ಬಲಿಯಾಗಿದ್ದರು.












Click it and Unblock the Notifications