ತುಮಕೂರಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ತುಮಕೂರು, ಜನವರಿ 14: ತುಮಕೂರಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಹೊಸ ಬಿಗ್ ಟ್ವಿಸ್ಟ್‌ ಸಿಕ್ಕಿದೆ.

ಆಕೆಯ ಪ್ರಿಯಕರನೇ ಕೊಲೆಗಾರ ಎನ್ನುವುದು ತನಿಖೆ ವೇಳೆ ಬಹಿರಂಗಗೊಂಡಿದೆ.ಡಿಸೆಂಬರ್ 25ರ ಸಂಜೆ ವೇಳೆ ಮಧುಕುಮಾರಿಯನ್ನ ರೌಂಡ್ಸ್ ಕರೆದುಕೊಂಡು ಹೋಗಿದ್ದಾನೆ.

ಸಿ.ಎಸ್.ಪುರದ ಅವರೇಹಳ್ಳಿಬಳಿ ಕಾರು ನಿಲ್ಲಿಸಿ ಹತ್ಯೆ ಮಾಡಿದ್ದಾನೆ. ಮಧುಕುಮಾರಿಯನ್ನು ವೇಲಿನಿಂದ ಉಸಿರುಗಟ್ಟಿಸಿ ಸಾಯಿಸಿ ನಾಲೆಯಲ್ಲಿ ಶವ ಹಾಕಿ ಪರಾರಿಯಾಗಿದ್ದ. ಜಯನಗರ ಪೊಲೀಸರ ಸುಳಿವಿನ ಮೂಲಕ ಸಿಎಸ್ ಪುರ ಪೊಲೀಸರು ಆರೋಪಿ ಮೊಹಮ್ಮದ್ ರೆಹಮಾನ್ ನ ಹೆಡೆಮುರಿಕಟ್ಟಿದ್ದಾರೆ.

Big Twist To Death Of An Unknown Woman In Tumkur

ತುಮಕೂರು ನಗರದ ಮಂಜುನಾಥ್ ನಗರದ ರೆಹಮಾನ್ ಜೊತೆ ಜಯನಗರ ಬಡಾವಣೆಯ ಮಧುಕುಮಾರಿಗೂ ದೈಹಿಕ ಸಂಪರ್ಕ ಇತ್ತು. ಈ ವೇಳೆ ಮಧುಕುಮಾರಿ ಆರೋಪಿ ರೆಹಮಾನ್ ಬಳಿ 4 ಲಕ್ಷ ರೂ ಸಾಲ ಪಡೆದಿದ್ದಳು ಎನ್ನಲಾಗಿದೆ.

ಸಾಲ ವಾಪಸ್ ಕೇಳಿದಾಗ ರೇಪ್ ಕೇಸ್ ಹಾಕಿ ಜೈಲಿಗೆ ಕಳಿಸೋದಾಗಿ ಮಧುಕುಮಾರಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಆಕ್ರೋಶಗೊಂಡ ಮೊಹಮದ್ ರೆಹಮಾನ್ ಉಪಾಯ ಮಾಡಿ ಮಧುಕುಮಾರಿಯನ್ನ ಕೊಲೆ ಮಾಡಿದ್ದಾನೆ.

ಮೃತ ಮಹಿಳೆಯನ್ನು ತುಮಕೂರು ನಗರದ ಜಯನಗರ ಬಡಾವಣೆಯ ಮಧುಕುಮಾರಿ ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ಮೊಹಮದ್ ರೆಹಮಾನ್ ಕೊಲೆ ಮಾಡಿದ್ದಾನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+