ತುಮಕೂರು: ಮಹಿಳೆ ಅಪಹರಿಸಿ ಅತ್ಯಾಚಾರ ಮಾಡಿದ್ದವರ ಬಂಧನ
ತುಮಕೂರು, ಅಕ್ಟೋಬರ್, 17: ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯನ್ನು ಡ್ರಾಪ್ ಕೊಡುವ ನೆಪದಲ್ಲಿ ಟಾಟಾ ಸುಮೋದಲ್ಲಿ ಕಿಡ್ನಾಪ್ ಮಾಡಿ ಅತ್ಯಾಚಾರ ಎಸಗಿದ್ದ ಕಾಮಾಂಧರನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ಅಕ್ಟೋಬರ್ 13 ರಂದು ಜಿಲ್ಲೆಯ ನಿಜಗಲ್ ಬಳಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದ 3 ಜನ ಆರೋಪಿಗಳನ್ನು ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ಕರೀಂಪಾಷಾ, ಷಪೀ ಉಲ್ಲಾ ಮತ್ತು ವಿ. ರಾಜು ಬಂಧಿತರಾಗಿದ್ದು ಇವರೆಲ್ಲ ತುಮಕೂರಿನ ನಿವಾಸಿಗಳು.[ತುಮಕೂರು: ಮಹಿಳೆ ಅಪಹರಣ, ಸಾಮೂಹಿಕ ಅತ್ಯಾಚಾರ]

ಬೆಂಗಳೂರಿಗೆ ಹೊರಟು ನಿಂತಿದ್ದ ಮಹಿಳೆಯನ್ನು ಡ್ರಾಪ್ ಕೊಡುವ ನಡಪದಲ್ಲಿ ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ನಂತರನ ಬಳಿಕ ನಿಜಗಲ್ ಬಳಿ ವಾಹನ ಚಲಿಸುತ್ತಿರುವಾಗಲೇ 28 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಸ್ವಸ್ಥಗೊಂಡ ಮಹಿಳೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಇದೀಗ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಪಿಸಲಾಗಿದೆ.
ಆರೋಪಿಗಳ ಪತ್ತೆಗಾಗಿ 5 ತಂಡಗಳನ್ನು ರಚನೆ ಮಾಡಲಾಗಿತ್ತು ಎಂದು ತುಮಕೂರು ಎಸ್ಪಿ ಕಾರ್ತಿಕ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ದಾಸರಹಳ್ಳಿಯ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಬೆಂಗಳೂರಿಗೆ ಹೊರಟು ನಿಂತಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದರು.












Click it and Unblock the Notifications