ಕೆಎಸ್‌ಆರ್‌ಟಿಸಿ-ಖಾಸಗಿ ಬಸ್ ಅಪಘಾತ: ಮೂವರ ದುರ್ಮರಣ
ತುಮಕೂರು, ಆಗಸ್ಟ್ 28: ಖಾಸಗಿ ಮತ್ತು ಸರ್ಕಾರಿ ಬಸ್ ನಡುವೆ ಮಂಗಳವಾರ ಮುಂಜಾನೆ ಸಂಭವಿಸಿದ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರನ್ನು ಖಾಸಗಿ ಬಸ್ ಚಾಲಕ ಧನರಾಜ್ (54), ಬೆಂಗಳೂರು ಮೂಲದ ನಿಖಿತಾ (27) ಮತ್ತು ಕಾರವಾರ ಮೂಲದ ಡಿಎಆರ್ ಸಬ್ ಇನ್‌ಸ್ಪೆಕ್ಟರ್ ರಮೇಶ್ ನಾಯಕ್ (46) ಎಂದು ಗುರುತಿಸಲಾಗಿದೆ.
ಶಿರಾ-ತುಮಕೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬೆಳಿಗ್ಗೆ 5.15ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕಳ್ಳಂಬೆಳ್ಳ ಪೊಲೀಸ್ ಠಾಣೆ ಮುಂಭಾಗ ಮುಂದೆ ಹೋಗುತ್ತಿದ್ದ ಈಶಾನ್ಯ ಸಾರಿಗೆ ಬಸ್‌ಗೆ ಹಿಂದಿನಿಂದ ಬಂದ ಸೀಬರ್ಡ್ ಬಸ್ (ಕಾರವಾರ- ಬೆಂಗಳೂರು ಮಾರ್ಗ) ಡಿಕ್ಕಿ ಹೊಡೆದಿದೆ.
ಕ್ಯಾಂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಪ್ರಯತ್ನದಲ್ಲಿ ಸೀಬರ್ಡ್ ಬಸ್ ಚಾಲಕ ನಿಯಂತ್ರಣ ತಪ್ಪಿ, ಮುಂದೆ ಸಾಗುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆಸಿದ್ದಾರೆ ಎನ್ನಲಾಗಿದೆ.
ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications