ಏ.1ರಂದು ಶಿವಕುಮಾರ ಸ್ವಾಮಿಗಳ 115ನೇ ಜನ್ಮದಿನ; 115 ಮಕ್ಕಳಿಗೆ ಶ್ರೀಗಳ ಹೆಸರು ನಾಮಕರಣ
ತುಮಕೂರು, ಮಾರ್ಚ್ 16: ನಡೆದಾಡುವ ದೇವರು, ಶತಾಯುಷಿ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮಿಗಳವರ ಪುಣ್ಯಸ್ಮರಣೆಯನ್ನು ರಾಜ್ಯದಾದ್ಯಂತ ಜೀವಂತವಾಗಿಡುವ ಉದ್ದೇಶದಿಂದ ಏಪ್ರಿಲ್ 1ರಂದು ಮಹಾಸ್ವಾಮಿಗಳವರ 115ನೇ ಹುಟ್ಟುಹಬ್ಬದಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ 115 ನವಜಾತ ಮಕ್ಕಳಿಗೆ ಶ್ರೀಗಳ ಹೆಸರಿಡುವ ನಾಮಕರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿ. ಶಿವಕುಮಾರ ಮಹಾಸ್ವಾಮಿ ಅನ್ನದಾನ ಸೇವಾ ಟ್ರಸ್ಟ್ ಬೆಂಗಳೂರು ಇವರ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, 115 ನವಜಾತ ಮಕ್ಕಳ ನಾಮಕರಣ ಹೊಂದುವ ಮಗುವಿಗೆ ತೊಟ್ಟಿಲು, ಹೊಸ ಉಡುಪು, ತೊಟ್ಟಿಲಿಗೆ ಹಾಸಿಗೆ, ಮಗುವಿಗೆ ಸಿದ್ದಲಿಂಗ ಮಹಾಸ್ವಾಮಿಗಳು ಆಶೀರ್ವಾದ ಮಾಡುವರು.

ಹುಟ್ಟಿದ ದಿನದಿಂದ 1 ವರ್ಷದೊಳಗಿನ ಮಕ್ಕಳಿಗೆ ಅವಕಾಶವಿರುತ್ತದೆ. ಮಕ್ಕಳ ಪೋಷಕರು ಅರ್ಜಿ ನಮೂನೆಯಲ್ಲಿ ವಿವರ ಸಲ್ಲಿಸುವುದು, ಪೋಷಕರ ವಿಳಾಸದ ಪುರಾವೆ ಮತ್ತು ಭಾವಚಿತ್ರ ನೀಡಬೇಕು.
ಮಗುವಿನ ಜನನ ಪ್ರಮಾಣ ಪತ್ರ, ಮಗುವಿನ ವೈದ್ಯಕೀಯ ಪಾಲನಾ ವಿವರ ಒದಗಿಸಬೇಕು. ಈಗಾಗಲೇ ನಾಮಕರಣ ಮಾಡಿರುವ ಮಕ್ಕಳಿಗೆ ಮರುನಾಮಕರಣಕ್ಕೆ ಅವಕಾಶವಿಲ್ಲ. ಅರ್ಜಿ ಸಲ್ಲಿಸಲು ಮಾರ್ಚ್ 29ರೊಳಗೆ ಅರ್ಜಿ ಸಲ್ಲಿಸಬೇಕು.

ಪೋಷಕರು ಹೆಚ್ಚಿನ ವಿವರಗಳಿಗೆ 8951305174 ಮತ್ತು 9019405060 ಸಂಪರ್ಕಿಸಬಹುದು ಎಂದು ದಿ. ಶಿವಕುಮಾರ ಮಹಾಸ್ವಾಮಿ ಅನ್ನದಾನ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಎ. ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ












Click it and Unblock the Notifications