• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಎನ್‌ಯುದಲ್ಲಿ ಕಾಂಡೋಮ್‌ನಲ್ಲೇ ಕೂದಲು ಕಟ್ಟಿಕೊಳ್ಳುತ್ತಾರೆ: ಮಾಜಿ ಡಿಜಿಪಿ ವಿವಾದಾತ್ಮಕ ಹೇಳಿಕೆ

|
Google Oneindia Kannada News

ಕಾಸರಗೋಡು, ನವೆಂಬರ್ 29: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ಕಾಂಡೋಮ್‌ಗಳ ಕಸವೇ ತುಂಬಿ ಹೋಗಿರುತ್ತದೆ ಎಂಬ ಹಳೆಯ ವಿವಾದವನ್ನು ಕೇರಳದ ಮಾಜಿ ಡಿಜಿಪಿ ಟಿ.ಪಿ. ಸೇನ್‌ಕುಮಾರ್ ಮತ್ತೆ ಕೆದಕಿದ್ದಾರೆ.

'ಜೆಎನ್‌ಯುದ ಪುರುಷರ ಹಾಸ್ಟೆಲ್‌ನ ಶೌಚಾಲಯದಿಂದ ಯುವತಿಯರು ಹೊರಬರುವುದನ್ನು ನಾನು ನೋಡಿದ್ದೇನೆ. ಅದೂ 40 ವರ್ಷಗಳ ಹಿಂದೆ. ಆಗ ಜೆಎನ್‌ಯು ಕ್ಯಾಂಪಸ್ ಕಾಂಡೋಮ್‌ಗಳ ಕಸದಿಂದಲೇ ತುಂಬಿ ಹೋಗಿತ್ತು' ಎಂದು ಸೇನ್‌ಕುಮಾರ್ ಹೇಳಿದರು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಕೇಂದ್ರ ವಿಶ್ವವಿದ್ಯಾಲಯದ ಆಯೋಜಿಸಿದ್ದ 'ಸಂವಿಧಾನ ಮತ್ತು ಪ್ರಜಾಪ್ರಭುತ್ವ: 70 ವರ್ಷಗಳ ಭಾರತದ ಅನುಭವ' ಕುರಿತಾದ ಎರಡು ದಿನಗಳ ಸಮ್ಮೇಳನದ ಭಾಗವಾಗಿ ಅವರು ಮಾತನಾಡಿದರು.

ಜೆಎನ್‌ಯು ವಿದ್ಯಾರ್ಥಿಗಳ ಮನೆಗೆ ಪೊಲೀಸರ ಭೇಟಿಜೆಎನ್‌ಯು ವಿದ್ಯಾರ್ಥಿಗಳ ಮನೆಗೆ ಪೊಲೀಸರ ಭೇಟಿ

ಜೆಎನ್‌ಯುದಲ್ಲಿ ಹಾಸ್ಟೆಲ್ ಶುಲ್ಕ ಹೆಚ್ಚಳ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡುತ್ತೀರಾ ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ, ಸೇನ್‌ಕುಮಾರ್ ಈ ಪ್ರತಿಕ್ರಿಯೆ ನೀಡಿದರು. ಸೇನ್ ಕುಮಾರ್ ಅವರು 1994ರಲ್ಲಿ ಕಾನೂನು ಪದವಿ ಪಡೆದಿದ್ದರು. ಆದರೆ ಆಗಲೇ ಅವರು ಪೊಲೀಸ್ ಇಲಾಖೆಯಲ್ಲಿ ಇದ್ದಿದ್ದರಿಂದ ವಕೀಲಿಕೆಗೆ ಪ್ರವೇಶ ಪಡೆಯಲು ಸಾಧ್ಯವಾಗಿರಲಿಲ್ಲ.

ಕಾಂಡೋಮ್‌ನಿಂದ ಕೂದಲು ಕಟ್ಟಿಕೊಳ್ಳುತ್ತಾರೆ

ಕಾಂಡೋಮ್‌ನಿಂದ ಕೂದಲು ಕಟ್ಟಿಕೊಳ್ಳುತ್ತಾರೆ

'ಈಗ ಜೆಎನ್‌ಯುದಲ್ಲಿನ ವಿದ್ಯಾರ್ಥಿನಿಯರು ತಮ್ಮ ಕೂದಲನ್ನೇ ಕಾಂಡೋಮ್‌ನಿಂದ ಕಟ್ಟಿಕೊಳ್ಳುತ್ತಿದ್ದಾರೆ. ನಮಗೆ ಅಂತಹ ವಿಶ್ವವಿದ್ಯಾಲಯ ಬೇಕಾಗಿಲ್ಲ' ಎಂದು ಹೇಳಿದರು. ಸೇನ್‌ಕುಮಾರ್ ಅವರು ಬಲಪಂಥೀಯ ಸಿದ್ಧಾಂತದ ಪರ ಒಲವುಳ್ಳವರಾಗಿ ಗುರುತಿಸಿಕೊಂಡಿದ್ದಾರೆ. ಇದೇ ಸಮ್ಮೇಳನಕ್ಕೆ ಕೇರಳ ಬಿಜೆಪಿ ಐಟಿ ಸೆಲ್‌ನ ಸಂಚಾಲಕ ಟಿ.ಜಿ. ಮೋಹನ್‌ದಾಸ್ ಅವರನ್ನು ಆಹ್ವಾನಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳು ಕಾರ್ಯಕ್ರಮವೊಂದನ್ನು ಬಹಿಷ್ಕರಿಸಿದ್ದರು.

ಆರ್ಟಿಕಲ್ 29, 30 ರದ್ದು ಮಾಡಬೇಕು

ಆರ್ಟಿಕಲ್ 29, 30 ರದ್ದು ಮಾಡಬೇಕು

'ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕುಗಳನ್ನು ನೀಡಿರುವ ಸಂವಿಧಾನದ 29 ಹಾಗೂ 30ನೇ ವಿಧಿಗಳನ್ನು ರದ್ದುಗೊಳಿಸಬೇಕು. ಈ ಎರಡು ವಿಧಿಗಳು ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಡುವೆ ದೇಶದಲ್ಲಿ ಅಸಮಾನತೆ ಸೃಷ್ಟಿಸುತ್ತಿದೆ. ಹೀಗಾಗಿ ಅವುಗಳನ್ನು ರದ್ದುಗೊಳಿಸಬೇಕು, ಇಲ್ಲವೇ ಬಹುಸಂಖ್ಯಾತರಿಗೂ ಆ ಹಕ್ಕುಗಳನ್ನು ನೀಡಬೇಕು' ಎಂದು ಆಗ್ರಹಿಸಿದರು.

''ಜೆಎನ್ ಯು ಬಂದ್ ಮಾಡಿ, ಸುಭಾಷ್ ಚಂದ್ರ ಬೋಸ್ ಹೆಸರಿಡಿ''ಜೆಎನ್ ಯು ಬಂದ್ ಮಾಡಿ, ಸುಭಾಷ್ ಚಂದ್ರ ಬೋಸ್ ಹೆಸರಿಡಿ"

ವಿವಾದ ಸೃಷ್ಟಿಸಿದ್ದ ಬಿಜೆಪಿ ಶಾಸಕ

ವಿವಾದ ಸೃಷ್ಟಿಸಿದ್ದ ಬಿಜೆಪಿ ಶಾಸಕ

2016ರಲ್ಲಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬಿಜೆಪಿ ಶಾಸಕ ಜ್ಞಾನದೇವ ಅಹುಜಾ ಇದೇ ರೀತಿಯ ಹೇಳಿಕೆ ನೀಡಿದ್ದರು. 'ಜೆಎನ್‌ಯುದಲ್ಲಿ ನಿತ್ಯವೂ ನೀವು 3,000 ಬಿಯರ್ ಕ್ಯಾನ್ ಮತ್ತು ಬಾಟಲ್‌ಗಳು, 2,000 ಭಾರತೀಯ ಮದ್ಯದ ಬಾಟಲಿಗಳು, 10,000 ಸಿಗರೇಟ್ ತುಂಡುಗಳು, 4,000 ಬೀಡಿಗಳು, 50,000 ಮೂಳೆ ತುಂಡುಗಳು, 2,000 ಚಿಪ್ಸ್ ಪ್ಯಾಕೆಟ್‌ಗಳು, 3,000 ಬಳಸಿದ ಕಾಂಡೋಮ್‌ಗಳು ಮತ್ತು 500 ಅಬಾರ್ಷನ್ ಇಂಜೆಕ್ಷನ್‌ಗಳನ್ನು ನೋಡಬಹುದು' ಎಂದು ಹೇಳಿದ್ದು ವಿವಾದ ಸೃಷ್ಟಿಸಿತ್ತು.

JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?JNUದಲ್ಲಿ ನಡೆಯುತ್ತಿರುವ ಸಂಶೋಧನೆ, ಆವಿಷ್ಕಾರಗಳೇನು?

ನಕಲಿ ಚಿತ್ರಗಳು

ನಕಲಿ ಚಿತ್ರಗಳು

ಜೆಎನ್‌ಯುದಲ್ಲಿ ವಿದ್ಯಾರ್ಥಿನಿಯರು ಜಡೆಗೆ ರಿಬ್ಬನ್ ಬದಲು ಕಾಂಡೋಮ್ ಬಳಸುತ್ತಾರೆ ಎಂಬಂತಹ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇವು ನಕಲಿ ಚಿತ್ರಗಳು ಎಂಬುದು ಸಾಬೀತಾಗಿತ್ತು. ಈ ಚಿತ್ರಗಳನ್ನೇ ಆಧಾರವಾಗಿಟ್ಟುಕೊಂಡು ವಾಸ್ತವ ಅರಿಯದೆ ಸೇನ್‌ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.

English summary
Former Kerala DGP TP Senkumar said that, JNU campus was littered with condoms. Now women tie their hair with them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X