ಕೇರಳದ ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಒಳಉಡುಪು ಬಿಚ್ಚಿಸಿದ ಭದ್ರತಾ ಸಿಬ್ಬಂದಿ

ತಿರುವನಂತಪುರ, ಜುಲೈ 18: ಕೇರಳದಲ್ಲಿ ನೀಟ್ ವೈದ್ಯಕೀಯ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಗೆ ಭದ್ರತಾ ಸಿಬ್ಬಂದಿ ಒಳ ಉಡುಪುಗಳನ್ನು ತೆಗೆಯಲು ಹೇಳಿರುವ ಆಘಾತಕಾರಿ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.

ನೀಟ್ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ದೃಷ್ಟಿಯಿಂದ ಕಟ್ಟು ನಿಟ್ಟಿನ ತಪಾಸಣೆ ಮಾಡಲಾಗುತ್ತಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬರ ಭದ್ರತಾ ತಪಾಸಣೆ ವೇಳೆ ಮೆಟಲ್ ಡಿಟೆಕ್ಟರ್ ಎಚ್ಚರಿಕೆ ಗಂಟೆ ಬಾರಿಸಿದೆ. ವಿದ್ಯಾರ್ಥಿನಿ ಧರಿಸಿದ್ದ ಒಳ ಉಡುಪಿನಲ್ಲಿ ಲೋಹದ ಕೊಕ್ಕೆಗಳು ಇರುವುದಕ್ಕೆ ಬೀಪ್ ಶಬ್ದ ಬಂದಿದೆ. ಇದರಿಂದ ವಿದ್ಯಾರ್ಥಿನಿಗೆ ಒಳ ಉಡುಪು (ಬ್ರಾ) ತೆಗೆದು ಪರೀಕ್ಷೆ ಕೊಠಡಿ ಪ್ರವೇಶಿಸುವಂತೆ ಭದ್ರತಾ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಇದರಿಂದ ವಿದ್ಯಾರ್ಥಿನಿ ಶಾಕ್‌ಗೆ ಒಳಗಾಗಿದ್ದಾರೆ.

ಆಘಾತಕ್ಕೊಳಗಾಗ ವಿದ್ಯಾರ್ಥಿನಿ ಮನವಿ ಮಾಡಿದರೂ ಭದ್ರತಾ ಸಿಬ್ಬಂದಿ ಆಕೆಗೆ ಅನುಮತಿ ನೀಡಿಲ್ಲ. ಬೇರೆ ದಾರಿಯಿಲ್ಲದೆ ವಿದ್ಯಾರ್ಥಿನಿ ತನ್ನ ತಾಯಿಗೆ ಒಳ ಉಡುಪನ್ನು ಬಿಚ್ಚಿಕೊಟ್ಟು ಮುಜುಗರದಿಂದಲೇ ಪರೀಕ್ಷೆಗೆ ಹಾಜರಾಗಿದ್ದಾಳೆ. ಈ ವೇಳೆ ಮುಜುಗರ ತಪ್ಪಿಸಿಕೊಳ್ಳಲು ಶಾಲು ಧರಿಸಲು ಅನುಮತಿ ನೀಡುವಂತೆ ಭದ್ರತಾ ಸಿಬ್ಬಂದಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

Security Personnel At NEET medical Exam Centre Forced To Girls To Take Off Their Innerwear

ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ ತಂದೆ

ಪರೀಕ್ಷೆ ನಂತರ ವಿದ್ಯಾರ್ಥಿನಿ ತನ್ನ ತಂದೆಗೆ ಪರೀಕ್ಷಾ ಕೇಂದ್ರದಲ್ಲಾದ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಚದಮಂಗಲಂನಲ್ಲಿರುವ ಸೆಂಟರ್, ಮಾರ್ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಈ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು. ಕಾಲೇಜು ಆಡಳಿತ ಮಂಡಳಿ ಇದರ ಜವಾಬ್ದಾರಿ ಹೊರಲು ನಿರಾಕರಿಸಿದೆ. ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ ಎಂದು ಕೊಲ್ಲಂ ಪೊಲೀಸ್ ಮುಖ್ಯಸ್ಥರು ಖಚಿತಪಡಿಸಿದ್ದಾರೆ.

Security Personnel At NEET medical Exam Centre Forced To Girls To Take Off Their Innerwear

"ಭದ್ರತಾ ತಪಾಸಣೆಯ ನಂತರ, ನನ್ನ ಮಗಳಿಗೆ ಒಳಉಡುಪುಗಳ ಲೋಹದ ಕೊಕ್ಕೆ ಮೆಟಲ್ ಡಿಟೆಕ್ಟರ್‌ನಿಂದ ಪತ್ತೆಯಾಗಿದೆ ಎಂದು ತಿಳಿಸಲಾಯಿತು, ಆದ್ದರಿಂದ ಅದನ್ನು ತೆಗೆದುಹಾಕಲು ಕೇಳಲಾಯಿತು. ಸುಮಾರು ಶೇಕಡ 90 ರಷ್ಟು ವಿದ್ಯಾರ್ಥಿನಿಯರು ತಮ್ಮ ಒಳಉಡುಪನ್ನು ತೆಗೆದು ಸ್ಟೋರ್ ರೂಂನಲ್ಲಿ ಇಡಬೇಕಾಗಿತ್ತು. ಪರೀಕ್ಷೆ ಬರೆಯುವಾಗ ಅಭ್ಯರ್ಥಿಗಳು ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾರೆ" ಎಂದು ಬಾಲಕಿಯ ತಂದೆ ತಿಳಿಸಿದ್ದಾರೆ.

ಜೀನ್ಸ್‌ನಲ್ಲಿ ಲೋಹದ ಬಟನ್‌ ಮತ್ತು ಪಾಕೆಟ್‌ಗಳು ಇದ್ದುದರಿಂದ ಮತ್ತೊಬ್ಬ ಹುಡುಗಿಯನ್ನು ತನ್ನ ಜೀನ್ಸ್ ಪ್ಯಾಂಟ್‌ ತೆಗೆಯುವಂತೆ ಕೇಳಲಾಯಿತು ಮತ್ತು ಪರೀಕ್ಷೆಯಲ್ಲಿ ಅಕ್ರಮ ಮತ್ತು ನಕಲು ತಡೆಯಲು ಅನೇಕ ಹುಡುಗಿಯರ ವಸ್ತ್ರದ ತೋಳುಗಳನ್ನು ಕತ್ತರಿಸಲಾಯಿತು ಎಂದು ಆರೋಪಗಳು ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+