ಬೇಕಿದ್ದರೆ ಶಬರಿಮಲೆ ಮುಖ್ಯ ಅರ್ಚಕ ರಾಜೀನಾಮೆ ನೀಡಲಿ: ಕೇರಳ ಸಿಎಂ

ತಿರುವನಂತಪುರಂ, ಜನವರಿ 03: ಸುಪ್ರಿಂಕೋರ್ಟ್‌ ತೀರ್ಪು ಒಪ್ಪಿಗೆ ಆಗದಿದ್ದಲ್ಲಿ, ಬೇಕಿದ್ದರೆ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಾಜೀನಾಮೆ ನೀಡಲಿ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಮಹಿಳೆಯರು ದೇವಾಲಯ ಪ್ರವೇಶಿಸಿದ್ದಕ್ಕೆ ದೇವಾಲಯದ ಶುದ್ಧೀಕರಣ ಮಾಡಿದ ಕ್ರಮವನ್ನು ವಿರೋಧಿಸಿ ಅವರು ಮಾತನಾಡಿದರು.

ಇಬ್ಬರು ನಡುವಯಸ್ಸಿನ ಮಹಿಳೆಯರು ಮಂಗಳವಾರ ನಡುರಾತ್ರಿ 3:45 ಕ್ಕೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿದ ಕಾರಣ, ದೇವಾಲಯದ ಪ್ರಧಾನ ಅರ್ಚಕ ಕಂದರಾರು ರಾಜೀವರು ಅವರು ದೇವಾಲಯವನ್ನು ಮುಚ್ಚಿ ಶುದ್ಧಿ ಕಾರ್ಯ ನೆರವೇರಿಸಿದರು. ಇದನ್ನು ಸಿಎಂ ಪಿಣರಾಯಿ ವಿಜಯನ್ ವಿರೋಧಿಸಿದ್ದಾರೆ.

Sabarimala head priest should have quit: Pinarayi Vijayan

ಸುಪ್ರಿಂಕೋರ್ಟ್‌ನ ತೀರ್ಪು ಸಮ್ಮತವಲ್ಲದಿದ್ದರೆ ಪ್ರಧಾನ ಅರ್ಚಕ ರಾಜೀನಾಮೆ ನೀಡಬೇಕು. ಅವರೂ ಸಹ ಕಕ್ಷೀದಾರ ಆಗಿದ್ದ ಕಾರಣ ಅದು ಸರಿಯೂ ಹೌದು, ಆದರೆ ಶುದ್ಧೀಕರಣ ರೀತಿಯ ಕಾರ್ಯ ಮಾಡುವುದು ತೀರ್ಪಿಗೆ ಅಗೌರವ ತೋರಿದಂತೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಯ್ಯಪ್ಪ ದೇವಾಲಯದ ಅರ್ಚಕರು ಸೇರಿ ಹಲವರು ಸುಪ್ರಿಂಕೋರ್ಟ್‌ ತೀರ್ಪನ್ನು ಒಪ್ಪಲು ನಿರಾಕರಿಸಿದ್ದಾರೆ. ಮೊನ್ನೆಯಷ್ಟೆ ಇಬ್ಬರು ಮಹಿಳೆಯರು ದೇವಾಲಯದ ಪ್ರವೇಶಿಸಿದ ಬೆನ್ನಲ್ಲೆ ಕೇರಳದಾದ್ಯಂತ ಹಿಂಸಾಚಾರ ಪ್ರಾರಂಭವಾಗಿದೆ. ಇಂದು ಸಹ ಕೇರಳ ಬಂದ್‌ ನಡೆದಿದ್ದು, ಬಿಜೆಪಿ ಮತ್ತು ಸಿಪಿಐಎಂ ಕಾರ್ಯಕರ್ತರ ನಡುವೆ ಭಾರಿ ಗಲಾಟೆಗಳು ಸಂಭವಿಸಿ ಹಲವರು ಗಾಯಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+