ರಾಹುಲ್ ಆಸ್ತಿ 15.88 ಕೋಟಿ, 72 ಲಕ್ಷ ಸಾಲ, ಎಮ್.ಫಿಲ್., ವಿದ್ಯಾಭ್ಯಾಸ
Recommended Video

ವಯನಾಡು (ಕೇರಳ), ಏಪ್ರಿಲ್ 5: ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಆಸ್ತಿ ಮೌಲ್ಯ 9.4 ಕೋಟಿ ರುಪಾಯಿ ಇದ್ದದ್ದು ಕಳೆದ ಐದು ವರ್ಷಗಳಲ್ಲಿ 15.88 ಕೋಟಿ ರುಪಾಯಿಗೆ ಏರಿಕೆ ಆಗಿದೆ. 2019ರ ಲೋಕಸಭಾ ಚುನಾವಣೆಗೆ ವಯನಾಡು ಲೋಕಸಭಾ ಕ್ಷೇತ್ರದಿಂದ ಗುರುವಾರ ಅವರು ನಾಮಪತ್ರ ಸಲ್ಲಿಸುವ ವೇಳೆ ನೀಡಿದ ಅಫಿಡವಿಟ್ ನಲ್ಲಿ ಈ ಸಂಗತಿ ಬಯಲಾಗಿದೆ.
ಅವರ ಬಳಿ ಒಟ್ಟು 9.4 ಕೋಟಿ ರುಪಾಯಿ ಮೌಲ್ಯದ ಆಸ್ತಿ ಇದೆ. 72 ಲಕ್ಷ ರುಪಾಯಿ ಸಾಲ ಮಾಡಿದ್ದಾರೆ. ಇನ್ನು ರಾಹುಲ್ ಬಳಿ ಇರುವ ನಗದು ಕೇವಲ 40 ಸಾವಿರ ರುಪಾಯಿ. ಗುರುವಾರದಂದು ಕಲ್ ಪೆಟ್ಟ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರವನ್ನು ರಾಹುಲ್ ಸಲ್ಲಿಸಿದರು. ಈ ವೇಳೆ ಸೋದರಿ ಪ್ರಿಯಾಂಕಾ ಗಾಂಧಿ ಜತೆಗಿದ್ದರು.
2017-18 ಆರ್ಥಿಕ ವರ್ಷದಲ್ಲಿ ರಾಹುಲ್ ಅವರ ಆದಾಯ 1.11 ಕೋಟಿ ರುಪಾಯಿ ಇದೆ. ಅವರ ಆದಾಯ ಮೂಲದಲ್ಲಿ ಸಂಸದರಾಗಿ ಅವರಿಗೆ ಬರುವ ಸಂಬಳ, ರಾಯಲ್ಟಿ ಮೂಲಕ ಬರುವ ಆದಾಯ, ಬಾದಿಗೆ ಮತ್ತು ಹೂಡಿಕೆಗಳು ಒಳಗೊಂಡಿವೆ.

ದೆಹಲಿಯ ಸುಲ್ತಾನ್ ಪುರ್ ಹಳ್ಳಿಯಲ್ಲಿನ ಫಾರ್ಮ್ ನಲ್ಲಿ ರಾಹುಲ್ ಗಾಂಧಿ ಅವರ ಪಾಲಿದೆ. ಅದರ ಮೌಲ್ಯ 1.32 ಕೋಟಿ ರುಪಾಯಿ. ಇನ್ನು 2014ರಲ್ಲಿ ಗುರ್ ಗ್ರಾಮ್ ನ ಸಿಗ್ನೇಚರ್ ಟವರ್ ನಲ್ಲಿ ಕಚೇರಿ ಸ್ಥಳ ಖರೀದಿಸಿದ್ದು, ಅದರ ಮೌಲ್ಯ 8.75 ಕೋಟಿ ರುಪಾಯಿ ಆಅಗಿದೆ. ಅವರ ಬಳಿ ಒಡವೆಗಳು ಸಹ ಇದ್ದು, ಅವುಗಳ ಮೌಲ್ಯ 2.91 ಲಕ್ಷ ರುಪಾಯಿ ಎಂದು ಘೋಷಿಸಲಾಗಿದೆ.
ಕಾಂಗ್ರೆಸ್ ಅಧ್ಯಕ್ಷರ ಮೇಲೆ 5 ಪ್ರಕರಣಗಳು ಬಾಕಿ ಇದ್ದು, ಅದರಲ್ಲಿ 4 ಮಾನನಷ್ಟ ಮೊಕದ್ದಮೆಗಳಾಗಿವೆ. ಆಂದಹಾಗೆ ಶೈಕ್ಷಣಿಕ ಅರ್ಹತೆ ಎಂಬಲ್ಲಿ ಅಭಿವೃದ್ಧಿ ಅಧ್ಯಯನದಲ್ಲಿ ಕೇಂಬಿಡ್ಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿನಿಂದ ಎಮ್.ಫಿಲ್., ಮಾಡಿದ್ದಾರೆ ಎಂದು ತಿಳಿಸಲಾಗಿದೆ.
ರಾಹುಲ್ ಗಾಂಧಿ ಅವರು 2004ರಿಂದ ಉತ್ತರಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾ ಬರುತ್ತಿದ್ದಾರೆ. ಈ ಬಾರಿ ದಕ್ಷಿಣ ಭಾರತದ ಕೇರಳ ರಾಜ್ಯದ ವಯನಾಡಿನಿಂದಲೂ ಸ್ಪರ್ಧೆಗೆ ಇಳಿದಿದ್ದಾರೆ.












Click it and Unblock the Notifications