ಕೊಟ್ಟಾಯಂ: ಬಾವಿಯಲ್ಲಿ ಕ್ಯಾಥೊಲಿಕ್ ಚರ್ಚ್ ಪಾದ್ರಿ ಶವ ಪತ್ತೆ

ತಿರುವನಂತಪುರಂ, ಜೂನ್ 22: ಕೊಟ್ಟಾಯಂ ಜಿಲ್ಲೆಯೊಂದರ ಚರ್ಚ್ ಆವರಣದಲ್ಲಿರುವ ಬಾವಿಯಲ್ಲಿ ಪಾದ್ರಿಯೊಬ್ಬರ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು 51 ವರ್ಷ ವಯಸ್ಸಿನ ಫಾದರ್ ಜಾರ್ಜ್ ಎಟ್ಟುಪರಾಯಿಲ್ ಎಂದು ಗುರುತಿಸಲಾಗಿದೆ.

Recommended Video

      ಜನ ನಿಮ್ಮನ್ನು ನೋಡುತ್ತಿರುತ್ತಾರೆ ಹುಷಾರ್ | Manmohan Singh | Narendra Modi | Oneindia Kannada

      ಪನ್ನಥುರಾದ ಬಳಿಯ ಸೈಂಟ್ ಥಾಮಸ್ ಚರ್ಚ್ ನಲ್ಲಿ ಸೇವೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಪಾದ್ರಿ ಕಾಣೆಯಾಗಿದ್ದಾರೆ ಎಂದು ಭಾನುವಾರ ರಾತ್ರಿ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು. ಸೋಮವಾರ ಬೆಳಗ್ಗೆ ಪಾದ್ರಿ ಬಗ್ಗೆ ಹುಡುಕಾಟ ನಡೆಸಿದಾಗ ಚರ್ಚ್ ಆವರಣದಲ್ಲಿದ್ದ ಬಾವಿಯೊಳಗೆ ಪಾದ್ರಿ ಶವ ಪತ್ತೆಯಾಗಿದೆ ಎಂದು ಕೊಟ್ಟಾಯಂ ಪೊಲೀಸರು ತಿಳಿಸಿದ್ದಾರೆ.

      ಅಗ್ನಿಶಾಮಕದಳ ಸಿಬ್ಬಂದಿ ನೆರವಿನಿಂದ ಬಾವಿನಿಂದ ಶವವನ್ನು ಹೊರಕ್ಕೆ ತೆಗೆಯಲಾಗಿದೆ. ಸೈರೋ ಮಲಬಾರ್ ಚರ್ಚ್ ಚಂಗನಚ್ಚೇರಿ ಅರ್ಕ್ಡಿಯೋಸೀಸ್ ಗೆ ಸೇರಿದ ಪಾದ್ರಿ ಎಂದು ತಿಳಿದು ಬಂದಿದೆ. ಚರ್ಚ್ ಗೆ ಹೊಂದಿಕೊಂಡಂತೆ ಇದ್ದ ವಸತಿಗೃಹದಲ್ಲಿ ವಾಸಿಸುತ್ತಿದ್ದರು.

      Priest found dead in well of Kerala Church

      ಭಾನುವಾರ ಸಂಜೆ ನಂತರ ಪಾದ್ರಿ ಕಾಣಿಸದಿದ್ದಾಗ, ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು. ರಾತ್ರಿ ಎಲ್ಲೆಡೆ ಹುಡುಕಾಟ ನಡೆಸಿದ್ದರೂ, ಬಾವಿಯಲ್ಲಿ ಹುಡುಕಿರಲಿಲ್ಲ. ಸೋಮವಾರ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ. ಪಾದ್ರಿ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಭಾನುವಾರ ರಾತ್ರಿ 10.50ರ ತನಕದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದ್ದು, ಆ ನಂತರ ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಆಗಿದೆ, ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+