ಕೊರೊನಾ ಸೋಂಕಿತರ ಏರ್ ಲಿಫ್ಟ್‌ಗೆ ತಯಾರಾದ ನೌಕಾಪಡೆ

ಕೊಚ್ಚಿ, ಏಪ್ರಿಲ್ 15 : ಕೇರಳದ ಕೊಚ್ಚಿಯಲ್ಲಿರುವ ಭಾರತೀಯ ನೌಕಾಪಡೆಯ ಯಾರ್ಡ್ ವಿಶೇಷ ಘಟಕವೊಂದನ್ನು ಸ್ಥಾಪನೆ ಮಾಡಿದೆ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ನೆರವಾಗಲು ಇದನ್ನು ಸ್ಥಾಪನೆ ಮಾಡಲಾಗಿದೆ.

ದ್ವೀಪ, ರಸ್ತೆ ಸಂಪರ್ಕ ಸರಿಯಾಗಿ ಇಲ್ಲದ ಗ್ರಾಮೀಣ ಪ್ರದೇಶದಲ್ಲಿ ಸಿಲುಕಿದ ಕೋವಿಡ್ -19 ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಿಶೇಷ ತಂಡವನ್ನು ರಚನೆ ಮಾಡಿದೆ. ಹೆಲಿಕಾಪ್ಟರ್ ಮೂಲಕ ಏರ್ ಲಿಫ್ಟ್ ಮಾಡಲಾಗುತ್ತದೆ.

ಈ ಸೇವೆಗಾಗಿಯೇ ವಿಶೇಷ ಹೆಲಿಕಾಪ್ಟರ್ ಸಿದ್ಧಪಡಿಸಲಾಗಿದೆ. ರೋಗಿಗಳನ್ನು ಸಾಗಣೆ ಮಾಡಿದರೂ ಹೆಲಿಕಾಪ್ಟರ್‌ ಸಿಬ್ಬಂದಿಗೆ ಸೋಂಕು ಹರಡದಂತೆ ತಡೆಯಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

Navy Developed Smart Evacuation Pod For Evacuation Of Covid-19 Patients

ನೌಕಾಪಡೆಯ ಯಾರ್ಡ್‌ನಲ್ಲಿರುವ ವೈದ್ಯಕೀಯ ಅಧಿಕಾರಿಯ ಸಲಹೆಯಂತೆ ವಿಶೇಷ ತಂಡ ರಚನೆಯಾಗಿದೆ. ಸುಮಾರು 59 ಲಕ್ಷ ವೆಚ್ಚದಲ್ಲಿ ಈ ತಂಡವನ್ನು ಸಿದ್ಧಪಡಿಸಲಾಗಿದೆ. ಹೆಲಿಕಾಪ್ಟರ್‌ ವಿನ್ಯಾಸದಲ್ಲಿಯೂ ಬದಲಾವಣೆ ಮಾಡಲಾಗಿದೆ.

ಎಎಲ್‌ಎಚ್‌ ಮಾದರಿಯ ಲಘು ಹೆಲಿಕಾಪ್ಟರ್‌ಗಳನ್ನು ಇದಕ್ಕಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ರೋಗಿಗಳನ್ನು ಸಾಗಣೆ ಮಾಡುವ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ.

ಕೇರಳದಲ್ಲಿ ಇದುವರೆಗೂ 386 ಕೊರೊನಾ ಪ್ರಕರಣಗಳು ದಾಖಲಾಗಿವೆ. 2 ಮೃತಪಟ್ಟಿದ್ದು, ಸೋಂಕು ಹರಡದಂತೆ ತಡೆಯಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+