ಮುಸ್ಲಿಂ ಸಮುದಾಯದಿಂದ ರೆಹನಾ ಫಾತಿಮಾ ಉಚ್ಚಾಟನೆ
ತಿರುವನಂತಪುರಂ, ಅಕ್ಟೋಬರ್ 22: ಕಿಸ್ ಆಫ್ ಲವ್ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಹಾಗೂ ಅವರ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಸ್ಲಿಂ ಜಮಾತ್ ಮುಂದಾಗಿದೆ.
ಸುಪ್ರೀಂಕೋರ್ಟಿನ ತೀರ್ಪಿನಂತೆ ಎಲ್ಲಾ ವಯೋಮಾನದ ಮಹಿಳೆಯರು ಶಬರಿಮಲೆ ದೇಗುಲವನ್ನು ಪ್ರವೇಶಿಸಬಹುದು ಎಂಬುದನ್ನು ಸಾಬೀತುಪಡಿಸಲು ವಿಫಲ ಯತ್ನ ಮಾಡಿದ್ದ ರೆಹಾನಾಗೆ ಭಾರಿ ಹಿನ್ನಡೆಯಾಗಿದೆ.
ರೆಹಾನಾ ಫಾತಿಮಾ ಹಾಗೂ ಅವರ ಕುಟುಂಬವನ್ನು ಮುಸ್ಲಿಂ ಸಮುದಾಯದಿಂದ ಉಚ್ಚಾಟಿಸುವಂತೆ ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್ ಪರಿಷತ್ ಗೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಸೂಚಿಸಿದೆ.

ರೆಹಾನಾ ಫಾತಿಮಾ ಅವರನ್ನು ಎರ್ನಾಕುಲಂ ಕೇಂದ್ರ ಮುಸ್ಲಿಂ ಜಮಾತ್‌ನಿಂದ ಉಚ್ಚಾಟನೆ ಮಾಡಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕೂಡ ಮಹಲ್ಲಾದ ಸದಸ್ಯತ್ವದಿಂದ ಹೊರಹಾಕಲಾಗಿದೆ. ರೆಹನಾ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪರಿಷತ್ ಅಧ್ಯಕ್ಷ ಎ. ಪೂಕುಂಜು ತಿಳಿಸಿದ್ದಾರೆ.
ಇದಲ್ಲದೆ, ರೆಹನಾ ಕಿಸ್ ಆಫ್ ಲವ್ ಕಾರ್ಯಕ್ರಮದ ಭಾಗವಾಗಿದ್ದರು. ಸಿನಿಮಾಗಳಲ್ಲಿ ನಗ್ನವಾಗಿ ನಟಿಸಿದ್ದಾರೆ. ಹಾಗಾಗಿ ಆಕೆ ಮುಸ್ಲಿಂ ಹೆಸರನ್ನು ಬಳಕೆ ಮಾಡಿಕೊಳ್ಳುವ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.












Click it and Unblock the Notifications