ಚಿತ್ರಸುದ್ದಿ: ಬೆಂಗಳೂರು ನಿವಾಸಿ, ಕೇರಳ ಸಿಎಂ ಪುತ್ರಿ ವೀಣಾಗೆ ಮದ್ವೆ
ತಿರುವನಂತಪುರ, ಜೂನ್ 15: ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ, ಬೆಂಗಳೂರು ನಿವಾಸಿ, ಟೆಕ್ ಕಂಪನಿಯೊಂದರ ಸಿಇಒ ವೀಣಾ ಅವರು ಇಂದು ಡೆಮಾಕ್ರೆಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ(DYFI) ರಾಷ್ಟ್ರಾಧ್ಯಕ್ಷ ಪಿ.ಎ.ಮೊಹಮದ್ ರಿಯಾಜ್ ರನ್ನು ವರಿಸಿದ್ದಾರೆ. ಕೊವಿಡ್ 19 ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಯಂತೆ ಆಯ್ದ ಆಪ್ತೇಷ್ಟರ ಸಮ್ಮುಖದಲ್ಲಿ ಸಿಎಂ ಸರ್ಕಾರಿ ನಿವಾಸದಲ್ಲಿ ಸೋಮವಾರ(ಜೂನ್ 15)ದಂದು ರಿಜಿಸ್ಟಾರ್ ಮದುವೆ ನೆರವೇರಿತು.
Recommended Video
ಈ ಮದುವೆ ಸಮಾರಂಭದಲ್ಲಿ 50 ಮಂದಿ ಮಾತ್ರ ಭಾಗವಹಿಸಿದ್ದರು. ಎರಡು ಕುಟುಂಬದ ಆಪ್ತರ ಸಮ್ಮುಖದಲ್ಲಿ ನಡೆದ ಸರಳ ವಿವಾಹದಲ್ಲಿ ವರ ಹಾಗೂ ವಧುವಿನ ಮಕ್ಕಳೆ ಮುಖ್ಯ ಅತಿಥಿಗಳಾಗಿದ್ದು ವಿಶೇಷ.
ವೀಣಾ ಅವರು ಬೆಂಗಳೂರು ಮೂಲದ ಸಾಫ್ಟ್ ವೇರ್ ಕಂಪನಿ ಸಿಇಒ ಆಗಿದ್ದರೆ, ಡೆಮಾಕ್ರೆಟಿಕ್ ಯೂಥ್ ಫೆಡರೇಶನ್ ಆಫ್ ಇಂಡಿಯಾ(DYFI) ರಾಷ್ಟ್ರಾಧ್ಯಕ್ಷ ಪಿ.ಎ.ಮೊಹಮದ್ ರಿಯಾಜ್ ಅವರು ವೃತ್ತಿಯಿಂದ ವಕೀಲರಾಗಿದ್ದಾರೆ. 2009ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೋಳಿಕ್ಕೋಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ ರಾಘವನ್ ವಿರುದ್ಧ ಸೋಲು ಕಂಡಿದ್ದರು.

ಇಬ್ಬರಿಗೂ ಎರಡನೇ ಮದುವೆ:
ವೀಣಾ ಹಾಗೂ ರಿಯಾಜ್ ಇಬ್ಬರೂ ಮೊದಲ ಮದುವೆಯಿಂದ ವಿಚ್ಛೇದಿತ ಪಡೆದುಕೊಂಡಿದ್ದಾರೆ. 2002ರಲ್ಲಿ ರಿಯಾಜ್ ಮೊದಲ ಮದುವೆ ಮಾಡಿಕೊಂಡಿದ್ದರು. ಅವರಿಗೆ ಮೊದಲ ಮದುವೆಯಿಂದ ಇಬ್ಬರ ಮಕ್ಕಳಿದ್ದಾರೆ. ಮೂರು ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು. ವೀಣಾ ಅವರು ಮೂರು ವರ್ಷದ ಹಿಂದೆ ವಿವಾಹ ವಿಚ್ಛೇದನ ಪಡೆದಿದ್ದು, ಅವರಿಗೆ ಮೊದಲ ಮದುವೆಯಿಂದ ಪುತ್ರನೊಬ್ಬನಿದ್ದಾನೆ.

ಬೆಂಗಳೂರು ಕಂಪನಿಯ ಸಿಇಒ ವೀಣಾ
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ತಾಯಿಕ್ಕಂಡಿಯಿಲ್ ಅವರು ಬೆಂಗಳೂರಿನಲ್ಲಿ ಆರ್ ಪಿ ಟೆಕ್ ಸಾಫ್ಟ್ ಸಂಸ್ಥೆಯ ಸಿಇಒ ಆಗಿದ್ದಾರೆ.
ಸಾಫ್ಟ್ ವೇರ್ ಇಂಜಿನಿಯರ್ ವೀಣಾ ಅವರು ಮೊದಲಿಗೆ ಬೆಂಗಳೂರಿನಲ್ಲಿ ಸ್ವಂತ ಕಂಪನಿ ಸ್ಥಾಪಿಸಿದರು. ನಂತರ ಆರೆಕಲ್ ಕಂಪನಿಯಲ್ಲಿ 8 ವರ್ಷಗಳ ದುಡಿದರು. ಸದ್ಯ ಕೇರಳ ಮೂಲದ ಎನ್ನಾರೈ ರವಿ ಪಿಳ್ಳೈ ಒಡೆತನ ಆರ್ ಪಿ ಸಾಫ್ಟ್ ಟೆಕ್ ಸಂಸ್ಥೆಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವಕೀಲರಾಗಿರುವ ರಿಯಾಜ್
ಪಿಎಂ ಅಬ್ದುಲ್ ಖಾದರ್ ಹಾಗೂ ಕೆಎಂ ಆಯಿಷಾಬಿ ಪುತ್ರರಾದ ರಿಯಾಜ್ ಕೇರಳದಲ್ಲಿ ಜನಪ್ರಿಯ ವ್ಯಕ್ತಿ. ಟಿವಿ ವಾಹಿನಿಗಳಲ್ಲಿ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವುದು, ಕೇಂದ್ರ ಸರ್ಕಾರದ ವಿರುದ್ಧ ಬೀಫ್ ಅಡುಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು.
|
ಪಿಣರಾಯಿ ವಿಜಯನ್ ಪುತ್ರಿ ವೀಣಾ
ಸಿಪಿಐಎಂ, ಎಲ್ ಡಿಎಫ್ ನಾಯಕ, ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಕಮಲಾ ಅವರು ತಮ್ಮ ಪುತ್ರಿ ವೀಣಾ ನಿರ್ಧಾರಕ್ಕೆ ಸದಾ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಕೇರಳ ಬದಲಿಗೆ ಬೆಂಗಳೂರಿನಲ್ಲೇ ಕಂಪನಿ ತೆರೆಯಲು ಸಮ್ಮತಿಸಿದರು. ಈಗ ಆರ್ ಪಿ ಟೆಕ್ ಸಾಫ್ಟ್ ಸಂಸ್ಥೆ ಸಿಇಒ ಆಗಿದ್ದರೂ ವೀಣಾ 2014ರಲ್ಲಿ ಸ್ಥಾಪಿಸಿದ ಗಂಗಾನಗರದ ವಿಳಾಸ ವಿರುವ ಎಕ್ಸಾ ಲಾಜಿಕ್ ಸಲ್ಯೂಷನ್ ಲಿಮಿಟೆಡ್ ಸಂಸ್ಥೆ ಇನ್ನೂ ಅಸ್ತಿತ್ವದಲ್ಲಿರಿಸಲಾಗಿದೆ. ವೀಣಾ ಅವರ ಸೋದರ ಎಚ್ ಎಸ್ ಬಿಸಿ ಬ್ಯಾಂಕಿನಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈಗ ರಿಯಾಜ್ ವರಿಸಲು ಅನುಮತಿ ನೀಡಿದ್ದು, ಮದುವೆ ಸರಳವಾಗಿ ನೆರವೇರಿದೆ.












Click it and Unblock the Notifications