ಕೇರಳ; ಐಸೋಲೇಷನ್ ವಾರ್ಡ್ ಆಗಲಿವೆ ಬೋಟ್ ಹೌಸ್
ಕೊಚ್ಚಿ, ಏಪ್ರಿಲ್ 15 : ಕೇರಳ ಎಂದರೆ ನೆನಪಿಗೆ ಬರುವುದು ಪ್ರವಾಸೋದ್ಯಮ, ಸುಂದರವಾದ ಬೋಟ್ ಹೌಸ್‌ಗಳು. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು, ಕ್ವಾರಂಟೈನ್ ವ್ಯವಸ್ಥೆ ಮಾಡಲು ಬೋಟ್ ಹೌಸ್ ಬಳಕೆ ಮಾಡಿಕೊಳ್ಳಲಾಗುತ್ತದೆ.
ಪ್ರಾಯೋಗಿಕವಾಗಿ Alappuzha ಜಿಲ್ಲೆಯಲ್ಲಿ ಬೋಟ್ ಹೌಸ್‌ಗಳನ್ನು ಐಸೋಲೇಷನ್ ವಾರ್ಡ್‌ಗಳಾಗಿ ಪರಿವರ್ತನೆ ಮಾಡಲು ತೀರ್ಮಾನಿಸಲಾಗಿದೆ. ಲಾಕ್ ಡೌನ್ ಪರಿಣಾಮ ಪ್ರವಾಸೋದ್ಯಮ ಚಟುವಟಿಕೆಗಳು ಸ್ಥಗಿತವಾಗಿವೆ.
"ಬೋಟ್ ಹೌಸ್‌ಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಿದರೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಹಾಸಿಗೆಗಳ ಸಂಖ್ಯೆ 1500 ರಿಂದ 2000ಕ್ಕೆ ಏರಿಕೆಯಾಗಲಿದೆ" ಎಂದು ಜಿಲ್ಲಾಧಿಕಾರಿ ಎಂ. ಅಂಜನಾ ಹೇಳಿದ್ದಾರೆ.

ಈಗಾಗಲೇ ಭಾರತೀಯ ರೈಲ್ವೆ ಸ್ಪೀಪರ್ ಕೋಚ್ ಬೋಗಿಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಿದೆ. ಇದಕ್ಕೆ ಸುಮಾರು ಖರ್ಚಾಗುತ್ತದೆ. ಆದರೆ, ಬೋಟ್ ಹೌಸ್ ಅನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡುವುದು ಸುಲಭ, ಕಡಿಮೆ ವೆಚ್ಚದಾಯಕವಾಗಿದೆ.
ಬೋಟ್ ಹೌಸ್‌ನಲ್ಲಿ ಹಾಸಿಗೆಯ ವ್ಯವಸ್ಥೆ ಇರುತ್ತದೆ. ವೈದ್ಯಕೀಯ ಉಪಕರಣ ಇಟ್ಟುಕೊಳ್ಳಲು, ಉಪಕರಣಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲು ವ್ಯವಸ್ಥೆಗಳನ್ನು ಮಾಡಿದರೆ ಸಾಕಾಗುತ್ತದೆ. ತುರ್ತು ಸಂದರ್ಭದಲ್ಲಿ ಬೋಟ್ ಹೌಸ್ ವಾರ್ಡ್‌ಗಳನ್ನು ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
Alappuzha ಜಿಲ್ಲೆಯಲ್ಲಿ ಇದುವರೆಗೂ 5 ಕೊರೊನಾ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇದುವರೆಗೂ 386 ಪ್ರಕರಣಗಳು ದಾಖಲಾಗಿದ್ದು, ಕಾಸರಗೋಡು (167) ಪ್ರಕರಣಗಳಿವೆ.












Click it and Unblock the Notifications