ಶಬರಿಮಲೆ ದೇಗುಲ ರಕ್ಷಣೆಗೆ ನಿಂತಿದ್ದ ರಾಹುಲ್ ಗೆ ಬಂಧನ ಭೀತಿ!
ತಿರುವನಂತಪುರಂ, ಡಿಸೆಂಬರ್ 16: ಶಬರಿಮಲೆ ದೇಗುಲ ಪರ ನಿಂತಿದ್ದ ಬಲಪಂಥೀಯ ಸಂಘಟನೆ ಅಯ್ಯಪ್ಪ ಧರ್ಮ ಸೇನಾ ಮುಖಂಡ ರಾಹುಲ್ ಈಶ್ವರ್ ಅವರು ಬಂಧನ ಭೀತಿ ಎದುರಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಆದರೆ, ಅಯ್ಯಪ್ಪ ಧರ್ಮ ಸೇನಾ ಇದಕ್ಕೆ ವಿರೋಧ ವ್ಯಕ್ತಪಡಿಸಿ, ದೇಗುಲದ ರಕ್ಷಣೆಗೆ ನಿಂತುಕೊಂಡಿತ್ತು. ಪ್ರಗತಿಪರರು ಹಾಗೂ ಧರ್ಮಸೇನಾ ನಡುವಿನ ಸಂಘರ್ಷದ ನಡುವೆ ಉಂಟಾದ ಘರ್ಷಣೆಗೆ ರಾಹುಲ್ ಈಶ್ವರ್ ಅವರನ್ನು ಹೊಣೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಅವರಿಗೆ ನೀಡಿದ ಜಾಮೀನನ್ನು ಕೇರಳ ಕೋರ್ಟ್ ಶನಿವಾರದಂದು ಹಿಂಪಡೆದಿದೆ. ಜಾಮೀನು ನೀಡುವಾಗ ಹಾಕಿದ್ದ ಷರತ್ತುಗಳ ಪೈಕಿ, ಪ್ರತಿದಿನ ಪಥನಥಿಟ್ಟ ಪೊಲೀಸ್ ಠಾಣೆಗೆ ಪ್ರತಿ ಶನಿವಾರದಂದು ಭೇಟಿ ನೀಡಬೇಕಿತ್ತು. ಆದರೆ, ಡಿಸೆಂಬರ್ 08ರಂದು ಪೊಲೀಸ್ ಠಾಣೆಗೆ ಭೇಟಿ ನೀಡಿರಲಿಲ್ಲ.
ಹೀಗಾಗಿ, ಈಶ್ವರ್ ಅವರನ್ನು ಮತ್ತೊಮ್ಮೆ ಬಂಧಿಸುವಂತೆ ಪಂಥನಥಿಟ್ಟ ಜಿಲ್ಲೆಯ ರನ್ನಿ ಕೋರ್ಟ್ ಆದೇಶಿಸಿದೆ. ಸೆಪ್ಟೆಂಬರ್ 28ರ ಸುಪ್ರೀಂಕೋರ್ಟ್ ಆದೇಶಕ್ಕೆ ಅಡ್ಡಿನಿಂತಿದ್ದರಿಂದ ರಾಹುಲ್ ಅವರನ್ನು ಬಂಧಿಸಲಾಗಿತ್ತು. ನಂತರ, ಷರತ್ತುಬದ್ಧ ಜಾಮೀನು ಪಡೆದಿದ್ದರು.












Click it and Unblock the Notifications