ಪತ್ರಕರ್ತನಿಗೆ ಕೊರೊನಾ ಬಂದ್ರೆ ಹಿರಿಯ ಅಧಿಕಾರಿಗಳಿಗೆ ಕ್ವಾರೆಂಟೈನ್!
ತಿರುವನಂತಪುರಂ, ಏಪ್ರಿಲ್.30: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇನ್ನೇನು ಇಳಿಮುಖವಾಯಿತು ಎನ್ನುವಷ್ಟರಲ್ಲೇ ಕೇರಳದಲ್ಲಿ ಆತಂಕ ಹೆಚ್ಚಿದೆ. ಬುಧವಾರ ಪತ್ತೆಯಾದ 10 ಮಂದಿ ಸೋಂಕಿತರ ಪೈಕಿ ಒಬ್ಬ ಪತ್ರಕರ್ತ ಹಾಗೂ ಮೂವರು ವೈದ್ಯಕೀಯ ಸಿಬ್ಬಂದಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.
Recommended Video
ಕೇರಳದ ಕಾಸರಗೂಡಿನಲ್ಲಿ ಬುಧವಾರ ಟಿವಿ ಮಾಧ್ಯಮದ ಒಬ್ಬ ಪತ್ರಕರ್ತನಿಗೆ ನೊವೆಲ್ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಗುರುವಾರದಿಂದಲೇ ಕಾಸರಗೂಡು ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು, ಐಜಿ ವಿಜಯ್ ಸಖಾರೆ ಮತ್ತು ಐಜಿ ಅಶೋಕ್ ಯಾದವ್ ಸ್ವಯಂ ದಿಗ್ಬಂಧನದಲ್ಲಿ ಇರಿಸಲಾಗಿದೆ.
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾಸರಗೂಡು ಜಿಲ್ಲೆಯ ಹಿರಿಯ ಅಧಿಕಾರಿಗಳನ್ನು ಸ್ವಯಂ ದಿಗ್ಬಂಧನದಲ್ಲಿ ಇರಿಸಿರುವ ಬಗ್ಗೆ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.

ಮಾಧ್ಯಮದ ಮೊದಲ ವ್ಯಕ್ತಿಗೆ ಕೊರೊನಾ ಸೋಂಕು:
ಬುಧವಾರ ಕಾಸರಗೂಡಿನಲ್ಲಿ ಮೊದಲ ಬಾರಿಗೆ ಟಿವಿ ಮಾಧ್ಯಮದ ಪತ್ರಕರ್ತರೊಬ್ಬರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಸುದ್ದಿ ಸಂಗ್ರಹಕ್ಕಾಗಿ ಅಲೆದಾಡಿದ ಪತ್ರಕರ್ತನ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು, ಟ್ರಾವೆಲ್ ಹಿಸ್ಟರಿ ಸಂಗ್ರಹಿಸುವ ಬಗ್ಗೆ ಪಿಣರಾಯಿ ವಿಜಯನ್ ತಿಳಿಸಿದ್ದರು. ಇದರ ಬೆನ್ನಲ್ಲೇ ಗುರುವಾರ ಕಾಸರಗೂಡು ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು, ಐಜಿ ವಿಜಯ್ ಸಖಾರೆ ಮತ್ತು ಐಜಿ ಅಶೋಕ್ ಯಾದವ್ ಸ್ವಯಂ ದಿಗ್ಬಂಧನದಲ್ಲಿ ಇರಿಸಲಾಗಿದೆ.












Click it and Unblock the Notifications