ಲೈಂಗಿಕ ಕಿರುಕುಳ ಆರೋಪ, ಯೋಗ ಗುರು ಆನಂದ್ ಬಂಧನ

ಸಿಡ್ನಿ, ಮೇ 08: ಸ್ವಯಂಘೋಷಿತ ಯೋಗ ಹಾಗೂ ಆಧಾತ್ಮ ಗುರು ಸ್ವಾಮಿ ಆನಂದ್ ಗಿರಿ ಅವರನ್ನು ಬಂಧಿಸಲಾಗಿದೆ. ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ ಹೊರೆಸಲಾಗಿದೆ.

ಎಸ್ ಬಿಎಸ್ ವೆಬ್ ತಾಣದ ವರದಿಯಂತೆ, 2016ರಲ್ಲಿ ರೂಟಿ ಹಿಲ್ಸ್ ನಲ್ಲಿ ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ್ದರು. 2018ರ ನವೆಂಬರ್ ನಲ್ಲಿ 34 ವರ್ಷ ವಯಸ್ಸಿನ ಮಹಿಳೆಗೆ ಕಿರುಕುಳ ನೀಡಿದ್ದರು.

ಆಸ್ಟ್ರೇಲಿಯಾದಲ್ಲಿ ಆಧ್ಯಾತ್ಮ ಪ್ರವಾಸದಲ್ಲಿದ್ದ ಆನಂದ್ ಅವರು ಮೇ 05ರಂದು ಭಾರತಕ್ಕೆ ಹಿಂತಿರುಗುವ ತಯಾರಿಯಲ್ಲಿದ್ದಾಗ ಬಂಧಿಸಿರುವ ಸಿಡ್ನಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

Harassment Case : Yoga guru Anand Giri arrested in Sydney

ಆನಂದ್ ಅವರಿಗೆ ಜಾಮೀನು ಸಿಗದ ಕಾರಣ, ಪೊಲೀಸ್ ಕಸ್ಟಡಿಯಲ್ಲಿದ್ದು ಜೂನ್ ನಲ್ಲಿ ವಿಚಾರಣೆ ಎದುರಿಸಲಿದ್ದಾರೆ.

ಉತ್ತರಪ್ರದೇಶದ ಪ್ರಸಿದ್ಧ ಬಡೇ ಹನುಮಾನ್ ದೇಗುಲದ ಮಹಾಂತರಾಗಿದ್ದು, ಬಾಗಂಬ್ರಿ ಗಡ್ಡಿ, ಪ್ರಯಾಗ್ ರಾಜ್ ನಲ್ಲೂ ಅಸ್ತಿತ್ವ ಹೊಂದಿದ್ದಾರೆ. 38 ವರ್ಷ ವಯಸ್ಸಿನ ಆನಂದ್ ಅವರ ಫೇಸ್ ಬುಕ್ ಪುಟದಲ್ಲಿ ಕುಂಭಮೇಳದಲ್ಲಿ ಪಾಲ್ಗೊಂಡ ಚಿತ್ರಗಳಿವೆ. ಯೋಗಿ ಆದಿತ್ಯನಾಥ್, ವೆಂಕಯ್ಯನಾಯ್ಡು ಸೇರಿದಂತೆ ಗಣ್ಯರ ಜೊತೆ ಕಾಣಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+